ಕೂಡ್ಲಿಗಿ ಹನುಮವ್ವ ನಿಧನ.

ಕೂಡ್ಲಿಗಿ. ಜೂ.30 :- ಕೂಡ್ಲಿಗಿ ಪಟ್ಟಣದ ಹಿರಿಯ ಜೀವ ಹನುಮವ್ವ (92) ನಿನ್ನೆ ಸಂಜೆ ಲೋ ಬಿಪಿಯಿಂದ ಮೃತಪಟ್ಟಿದ್ದಾರೆ.
ಹಗರಿಬೊಮ್ಮನಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಎಸ್ ಕೆ ಬಸವರಾಜ ಹಾಗೂ ಸಂಡೂರು ತಾಲೂಕಿನಲ್ಲಿ ಶಿಕ್ಷಕ ವೃತ್ತಿಯಲ್ಲಿರುವ ಕನಕವ್ವನವರ ಮಂಜುನಾಥ ಇವರ ತಾಯಿಯಾಗಿದ್ದು ಪಟ್ಟಣದ ಹಿರಿಯ ಜೀವಗಳಲ್ಲಿ ಒಂದಾಗಿದ್ದ ಹನುಮವ್ವ ಕಳೆದ ಸಂಜೆ ವಯೋಸಹಜದಿಂದ ಮನೆಯಲ್ಲೇ ನಿಧಾನರಾಗಿದ್ದು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧು ಬಾಂಧವರನ್ನು ಅಗಲಿದ್ದಾರೆ ಇವರ ಅಂತ್ಯಕ್ರಿಯೆಯನ್ನು ಪಟ್ಟಣದ ಹೊರವಲಯದ ಶಾಂತಿವನದಲ್ಲಿ ಇಂದು ಮಧ್ಯಾಹ್ನ ಜರುಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.