ಮಹರ್ಷಿ ಶ್ರೀಯಜ್ಞವಲ್ಕ್ಯರ ಅನುಯಾಯಿಗಳ ರಾಜ್ಯಸಮ್ಮೇಳನ ಹುಬ್ಬಳ್ಳಿಯಲ್ಲಿ
ಕಲಬುರಗಿ:ಜೂ.30:ಮಹರ್ಷಿ ಶ್ರೀಯಜ್ಞವಲ್ಕ್ಯ ಗುರುಗಳ ಬಗ್ಗೆ ಸಂಪೂರ್ಣವಾದ ಜ್ಞಾನ ಹಾಗೂ ಅವರ ಕೊಡುಗೆಗಳನ್ನು ಇಂದಿನ ಯುವ ಪೀಳಿಗೆಗೆ ಮನವರಿಕೆ ಮಾಡಿ ಕೊಡುವ ಉದ್ದೇಶದಿಂದ ನವಂಬರನಲ್ಲಿ ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಶ್ರೀಯಜ್ಞವಲ್ಕ್ಯರ ಅನುಯಾಯಿಗಳ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಯೋಗೀಶ್ವರ ಸೇವಾ ಟ್ರಸ್ಟ್ ಹುಬ್ಬಳ್ಳಿಯ ಪ್ರಮುಖರಾದ ಶ್ರೀ ಸತ್ಯನಾರಾಯಣ ಮರಟಗೇರಿ ಮಾತನಾಡಿದರು.
ಕಲಬುರಗಿ ನಗರದ ಸಂಗಮೇಶ್ವರ ಬಡಾವಣೆಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶ್ರೀ ಯಾಜ್ಞವಲ್ಕ್ಯ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಶ್ರೀಯಜ್ಞವಲ್ಕ್ಯರು ಕೇವಲ ವಿಪ್ರರಿಗೆ ಮಾತ್ರವಲ್ಲದೆ ಇಡೀ ಮಾನವ ಕುಲದ ಕಲ್ಯಾಣಕ್ಕಾಗಿ ವೇದ, ಉಪನಿಷತ್ತುಗಳನ್ನು ಕೊಡುಗೆಗಳನ್ನಾಗಿ ನೀಡಿದ್ದಾರೆ.
ಸೂರ್ಯನಿಂದ ಪಡೆದ ಬ್ರಹ್ಮ ಜ್ಞಾನವನ್ನು ಮನಕುಲದ ಒಳಿತಿಗಾಗಿ ನೀಡಿದ್ದಾರೆ, ಸಪ್ತ ಋಷಿಗಳು ಕೂಡ ಬ್ರಹ್ಮ ಜ್ಞಾನವನ್ನು ಶ್ರೀಯಜ್ಞವಲ್ಕ್ಯರಲ್ಲಿ ಪಡೆದಿದ್ದರು.ಬ್ರಾಹ್ಮಣರೆಲ್ಲರೂ ಶ್ರೀಯಜ್ಞವಲ್ಕ್ಯ ಅನುಯಾಯಿಗಳು ನಮ್ಮೆಲ್ಲರ ಸಂಪ್ರದಾಯಗಳು ಶ್ರೀಯಜ್ಞವಲ್ಕ್ಯರಿಂದಲೇ ಪ್ರಾರಂಭವಾಗುತ್ತವೆ, ಹಳ್ಳಿಯಿಂದ ದಿಲ್ಲಿಯವರೆಗೂ ನಾವು ಶ್ರೀಯಜ್ಞವಲ್ಕ್ಯರ ಜಯಂತಿಯನ್ನು ಆಚರಿಸುತ್ತೇವೆ, ಅವರ ಕೊಡುಗೆಗಳನ್ನು ಸಮಾಜಕ್ಕೆ ತಲುಪಿಸಲು ರಾಜ್ಯಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
ಇಂದಿನ ಯುವ ಪೀಳಿಗೆ ಸನಾತನ ಧರ್ಮವನ್ನು ತಿಳಿಯುವುದರಲ್ಲಿ ಉತ್ಸುಕವಾಗಿದೆ ಹಿರಿಯರಾದ ನಾವು ನಮ್ಮ ಧರ್ಮ, ಸಂಸ್ಕಾರಗಳನ್ನು ಸಮ್ಮೇಳನದ ಮೂಲಕ ತಿಳಿಸಿ ಕೊಡುವ ಜವಾಬ್ದಾರಿ ಹಿರಿಯರಾದ ನಮ್ಮ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಯಜ್ಞವಲ್ಕ್ಯ ಸಮಿತಿ ಕಲಬುರಗಿಯ, ಅಧ್ಯಕ್ಷರಾದ ಶ್ರೀಮಲ್ಹಾರಾವ ಕುಲಕರ್ಣಿ ಗಾರಂಪಳ್ಳಿ ಮಾತನಾಡಿ ಕಲಬುರಗಿಯ ವಿಪ್ರರೆಲ್ಲರೂ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಭಕ್ತಿಯಿಂದ ಭಾಗಿಯಾಗುತ್ತೇವೆ, ಧರ್ಮ ಕಾರ್ಯದಲ್ಲಿ ನಾವೆಲ್ಲರೂ ಒಂದಾಗಿ ಶ್ರಮಿಸೋಣ ಎಂದರು.
ಹಿರಿಯರಾದ ಶ್ರೀ ಶಾಮಾಚಾರ್ಯ ಬೈಚಬಾಳ್ ಮಾತನಾಡಿ ಧರ್ಮ ಜಾಗೃತಿಗೊಳಿಸುವ ಹಾಗೂ ಮಹಾಋಷಿಗಳ ಮಹಿಮೆ ಹಾಗೂ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸುವ ಸಮ್ಮೇಳನ ಆಯೋಜಿಸಿರುವುದು ಆಯೋಜಿಸುತ್ತಿರುವುದು ಸ್ವಾಗತಾರ್ಹ ಎಂದರು.
ಶ್ರೀಯಜ್ಞವಲ್ಕ್ಯ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ವಕೀಲ್ ಮಾತನಾಡಿ ಯಜ್ಞದಿಂದ ಜನಿಸಿದ ಶ್ರೀಯಜ್ಞವಲ್ಕ್ಯರು ಸಾಕ್ಷಾತ್ ಬ್ರಹ್ಮನ ರೂಪ ಭೂಮಂಡಲದ ಪ್ರತಿ ಜೀವಿಗಳಿಗೂ ಅವರ ಉಪದೇಶ ನೀಡಿದ್ದಾರೆ ಎಂದರು.
ರಾಘವೇಂದ್ರ ವಕೀಲ್ ಸ್ವಾಗತಿಸಿದರು, ವಿನುತ ಜೋಶಿ ವಂದಿಸಿದರು.ಪ್ರಮುಖರಾದ ಅಶೋಕ್ ಮಳ್ಳಿ, ಭೀಮರಾವ್ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ಭೀಮಸೇನರಾವ್ ಸಿಂಧಗೇರಿ, ವಾಸುದೇವರಾವ್ ಕುಳಗೇರಿ, ಅನಿಲ್ ಕುಲಕರ್ಣಿ,ಮಂಜುನಾಥ್ ಕುಲಕರ್ಣಿ, ಶ್ರೀರಾಮಾಚಾರ,ದಯಾಘನ್ ಧಾರ್ವಾಡ್ಕರ್, ಪ್ರಾಣೇಶ್ ಕುಲಕರ್ಣಿ, ಜನಾರ್ಧನ್ ಕುಲಕರ್ಣಿ, ಮಾರುತಿ ಕುಲಕರ್ಣಿ, ಸತ್ಯನಾರಾಯಣ ಜೋಶಿ, ವಿನುತ ಜೋಶಿ, ಪ್ರಮೋದ್ ಕಾಮನಟಗಿ, ರಮೇಶ್ ಕುಲಕರ್ಣಿ, ಶ್ರೀನಿವಾಸ್, ಶ್ರೀಮತಿ ಲಕ್ಷ್ಮಿ ಕುಲಕರ್ಣಿ ಶ್ರೀಮತಿ ಅಂಬುಜಾ ಸಿಂಧಗೇರಿ, ಶೀಲಾ ಜೋಶಿ ವಿಜಯಲಕ್ಷ್ಮಿ ಬಡಶೇಶಿ, ವಾಣಿ ಕುಲಕರ್ಣಿ ಇದ್ದರು.