ಕಲಬುರಗಿ ಗ್ರೇಡ್ -2 ತಹಶೀಲ್ದಾರ್ ನಿವೃತ್ತಿ ಜಿಲ್ಲಾಡಳಿತದಿಂದ ಗೌರವ ಸನ್ಮಾನ
ಕಲಬುರಗಿ:ಜೂ.೩೦: ಇಲ್ಲಿನ ತಹಶೀಲ್ದಾರ್,ಹಾಗೂ ಹೆಚ್ಚುವರಿ ಪ್ರಭಾರಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಶಿಷ್ಟಾಚಾರದ ತಹಶೀಲ್ದಾರ್ ಸೈಯದ್ ನಿಸಾರ್ ಅಹ್ಮದ್ ವಜೀರ್ ಅವರು ಶನಿವಾರ ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಸನ್ಮಾನಿಸಿದರು
ನಂತರ ಮಾತನಾಡಿದ ಅವರು ನಿಸಾರ್ ಅಹ್ಮದ್ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಸಗರ ಗ್ರಾಮದವರು ಅವರು 1985ರಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಸೇವೆಗೆ ಸೇರಿದರು.
ತದನಂತರ ಕಂದಾಯ ನಿರೀಕ್ಷಕರಾಗಿ ಶಿರೆಸ್ತೇದರಾಗಿ ತಮ್ಮ ಸುಧೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. 1 ವರ್ಷ ಕಾಲ ಕಲ್ಬುರ್ಗಿ ಗ್ರೇಡ್ -2 ತಹಶೀಲ್ದಾರ್ ರಾಗಿ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಶಿಷ್ಟಾಚಾರ ತಹಶೀಲ್ದಾರ್ ಆಗಿ.ಕೆಲಸ ಮಾಡಿ
ನಿನ್ನೆ ಜೂನ 29 ರಂದು ನಿವೃತ್ತಿ ಹೊಂದಿದರು ಅವರ ನಿವೃತ್ತಿ ಜೀವನ ಸುಖಕರವಾಗಿರಲಿ.ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಿಗಿ ಸೇರಿದಂತೆ ಚುನಾವಣೆಯ ಶಾಖೆಯ ಗ್ರೇಡ್-2 ತಹಶೀಲ್ದಾರ ಪಂಪಯ್ಯ, ಲೆಕ್ಕಾಧಿಕಾರಿ ಮಂಜುಳಾ,ಶಿರಸ್ತೆದಾರ ರಫಿಕ್ ಅಹ್ಮದ್,ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ನಿವೃತ್ತಿ ಹೊಂದಿದ ನಿಸಾರ್ ಅಹ್ಮದ್ ರನ್ನು ಸನ್ಮಾನಿಸಿದರು.