6 ಲಕ್ಷ 51 ಸಾವಿರ ಕಿಮ್ಮತ್ತಿನ ಚಿನ್ನಾಭರಣ ವಶಕಳ್ಳರ ಹೆಡೆಮುರಿ ಕಟ್ಟಿದ ಖಾಕಿ ಪಡೆ
ತಾಳಿಕೋಟೆ:ಜೂ.30: ಪಟ್ಟಣದ ವಿಧ್ಯಾನಗರ ಬಡಾವಣೆಯ ಶಿವಕುಮಾರ ಬಸಣ್ಣ ಕಂಭಾರ ಎಂಬವರ ವಡೆತನಕ್ಕೆ ಸೇರಿದ ಅಮೃತಾ ಜ್ಯೂವೆಲರ್ಸ್ ಅಂಗಡಿಯನ್ನು ಮೇ.22 ಮತ್ತು 23 ರ ರಾತ್ರಿ ವೇಳೆ ಅಂಗಡಿಯ ಕೀಲಿ ಮುರಿದು ಅಂಗಡಿಯಲ್ಲಿದ್ದ ಚಿನ್ನಾಭರಣ ಅಲ್ಲದೇ ನಗದು ಹಣವನ್ನು ದೂಚಿಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸ್‍ರು ಹೆಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿತರಾದ ದೇವೀಂದ್ರ ಶರಣಪ್ಪ ತಳವಾರ(25), ಮಲ್ಲಣ್ಣ ಈರಣ್ಣ ಬೂದಿಹಾಳ(19) ಇವರು ಅಂದು ರಾತ್ರಿ ಸಮಯದಲ್ಲಿ ಅಮೃತಾ ಜ್ಯೂವೆಲರಸ್ ಅಂಗಡಿಯ ಹತ್ತಿರ ಬಂದು ಅಂಗಡಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅಂಗಡಿಯ ಕೊಂಡಿ ಮುರಿದು ಅಂಗಡಿಯಲ್ಲಿದ್ದ 77 ಗ್ರಾಂ ಬಂಗಾರದ ಸಾಮಾನುಗಳು, ಕಿಮ್ಮತ್ತು 539000 ರೂ., 253 ಗ್ರಾಂ ಬೆಳ್ಳಿ ಸಾಮಾನುಗಳು ಕಿಮ್ಮತ್ತು 20240 ಮತ್ತು 5 ಸಾವಿರ ರೂ. ಹಣ ಕಳುವುಮಾಡಿಕೊಂಡು ಪರಾರಿಯಾಗಿದ್ದರು.
ಅದರಿ ಪ್ರಕರ್ಣ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಭಗವಾನ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಅವರ ಮಾರ್ಗದರ್ಶನದಲ್ಲಿ ಡಿವಾಯ್‍ಎಸ್‍ಪಿ ಬಲ್ಲಪ್ಪ ನಂದಗಾಂವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‍ಐ ರಾಮನಗೌಡ ಸಂಕನಾಳ, ಅಪರಾಧ ವಿಭಾಗ ಪಿಎಸ್‍ಐ ಆರ್.ಎಸ್.ಭಂಗಿ, ಸಿಬ್ಬಂದಿಗಳಾದ ಬಿ.ಜಿ.ಬಲಕಲ್ಲ, ಎಂ.ಎಲ್.ಪಟ್ಟೇದ, ಎಂ.ಕೆ.ಡೋಣೂರ, ಸೈಫನ್ ಕುರಿ, ಸಂಜು ದೊಡಮನಿ, ಎಸ್.ಪಿ.ಜಾಧವ, ಸಂಗಮೇಶ ಚಲವಾದಿ, ಪಿ.ಎನ್.ಪೂಜಾರಿ, ಅವರನ್ನೋಳಗೊಂಡು ತನಿಖಾ ತಂಡವನ್ನು ರಚಿಸಲಾಗಿತ್ತು.
ಸದರಿ ಪ್ರಕರ್ಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್‍ರು ತಾಂತ್ರಿಕ ಸಹಾಯದಿಂದ ಈ ಕಳುವಿನ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿತರಾದ ದೇವಿಂದ್ರ ತಳವಾರ ಮತ್ತು ಮಲ್ಲಣ್ಣ ಬೂದಿಹಾಳ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳುವು ಮಾಡಿದ್ದರ ಕುರಿತು ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಆರೋಪಿತರಿಂದ ಬಂಗಾರದ ಬೇಬಿ ಉಂಗುರಗಳು 16 ಪೀಸ್ 4 ಗ್ರಾಂ. 850ಮಿ, ಹೆಣ್ಣು ಮಕ್ಕಳು ಹಾಕಿಕೊಳ್ಳುವ ಬಂಗಾರದ ಕಿವಿರಿಂಗಗಳು 23 ಪೀಸ್‍ಗಳು 15 ಗ್ರಾಂ. 100ಮಿ, ಕಿವಿಯಲ್ಲಿ ಹಾಕಿಕೊಳ್ಳುವ ಪ್ಯಾನಿಷ ಟಾಪ್ಸ್‍ಗಳು 46 ಪೀಸ್‍ಗಳು 32 ಗ್ರಾಂ. 60ಮಿ, ಬಂಗಾರದ ಉಂಗುರುಗಳು 10 ಗ್ರಾಂ. 930ಮಿ, ಬಂಗಾರದ ಪತ್ತಾ ಒಂದು ಪೀಸ್ 1 ಗ್ರಾಂ. 850 ಮಿ, ಕೊರಳ್ಳಲ್ಲಿ ಹಾಕಿಕೊಳ್ಳುವ ಬಂಗಾರದ ಚೈನ್ ಮತ್ತು ಅದಕ್ಕೆ ಪದಕ ಜೊಡಿಸಿದ್ದು ಒಂದು ಪೀಸ್ 5 ಗ್ರಾಂ.550ಮಿ, ಬಂಗಾರದ ಗುಂಡುಗಳು ಸಣ್ಣ ಗ್ರಾತ್ರದ 11 ಪೀಸ್‍ಗಳು 880 ಮಿ, ಸಣ್ಣ ಫೀರಿಕೆ ಒಂದು ಪಿಸ್ 50 ಮಿ, ಕಿವಿಯಲ್ಲಿ ಹಾಕಿಕೊಳ್ಳುವ ಬಂಗಾರದ ಸೈಡ ರಿಂಗ್ ಸಣ್ಣ ಗ್ರಾತ್ರದ್ದು 8 ಪೀಸ್ 3 ಗ್ರಾಂ. 510 ಮಿ, ಒಟ್ಟು 77 ಗ್ರಾಂ. 280ಮಿ, ಅಂದಾಜು ಕಿಮ್ಮತ್ತು 539000 ರೂ., ಮತ್ತು ಕಾಲಲ್ಲಿ ಆಕಿಕೊಳ್ಳುವ ಬೆಳ್ಳಿ ಚೈನ್ ಎರಡು ಜೋಡಿ 194 ಗ್ರಾಂ, ಕಾಲಲ್ಲಿ ಹಾಕಿಕೊಳ್ಳುವ ಬೆಳ್ಳಿ ಹಾಲಗಡಗದ ಒಂದು ಜೋಡಿ 59 ಗ್ರಾಂ. ಒಟ್ಟು 253 ಗ್ರಾಂ. ಅಂದಾಜು ಕಿಮ್ಮತ್ತು 20.240 ರೂ., ಮತ್ತು 1200 ನಗದು, ಅಲ್ಲದೇ ಕೃತ್ಯಕ್ಕೆ ಉಪಯೋಗಿಸಿದ ಮೋಟರ್ ಸೈಕಲ್ ಒಳಗೊಂಡು ಅಂದಾಜು 6,51,240 ರೂ.ಗಳ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸದರಿ ಪ್ರಕರ್ಣ ಪತ್ತೆ ಹಚ್ಚುವದರ ಜೊತೆಗೆ ಆರೋಪಿತರನ್ನು ಬಂದಿಸುವಲ್ಲಿ ಯಶಸ್ವಿಯಾದ ತಂಡದ ಎಲ್ಲರ ಕಾರ್ಯವನ್ನು ಶ್ಲಾಘಿಸುವದರೊಂದಿಗೆ ಪ್ರಶಂಶನಾ ಪತ್ರದೊಂದಿಗೆ ನಗದು ಭಹುಮಾನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಭಗವಾನ ಅವರು ಘೋಷಿಸಿದ್ದಾರೆ.