ಧಾರವಾಡ: ವಿಶೇಷ ಉಪನ್ಯಾಸ
ಧಾರವಾಡ,ಜೂ30: ಕನ್ನಡದ ಸಮನ್ವಯ ಕವಿ ಎಂದುಖ್ಯಾತಿ ಪಡೆದ ನಾಡೋಜಡಾ. ಚೆನ್ನವೀರಕಣವಿ ಹೊಸಗನ್ನಡಕಾವ್ಯದ ಪ್ರಮುಖ ಕವಿಗಳೊಲ್ಲಬ್ಬರು.ಅವರುಕಾವ್ಯವೇಜೀವನಎಂದು ಬದುಕಿದಅಗ್ರಗಣ್ಯರುಎಂದು ಬೆಂಗಳೂರಿನ ವಿಮರ್ಶಕಎಸ್.ಆರ್. ವಿಜಯಶಂಕರ್ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜಡಾ.ಚೆನ್ನವೀರಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಆಯೋಜಿಸಿದ್ದ ಕನ್ನಡದಯುವ ಲೇಖಕರಿಗೆಚೆನ್ನವೀರಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ವಿಶೇಷ ಉಪನ್ಯಾಸದಲ್ಲಿ ಚೆನ್ನವೀರಕಣವಿಯವರ ಕಾವ್ಯಚಿತ್ರಗಳಲ್ಲಿ ತಾತ್ವಿಕ ನೆಲೆಗಳು' ವಿಷಯಕುರಿತು ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದಅವರು, ಡಾ.ಚೆನ್ನವೀರಕಣವಿ ಅವರಕಾವ್ಯದ ಶಕ್ತಿ ಭಾವನಾ ಪ್ರಧಾನವಾದುದು.ಅವರ ಕಾವ್ಯಗಳಲ್ಲಿ ವ್ಯಕ್ತಿತ್ವ ನಿರ್ಮಾಣ ನಿಸರ್ಗದರಮ್ಯತೆಯೇ ಪ್ರಧಾನ ಹಂಬಲಗಳಾಗಿವೆ. ಮಾನವೀಯತೆ, ಆದರ್ಶ ಹಾಗೂ ಸೌಜನ್ಯದತಾತ್ವಿಕ ಸಿದ್ಧಾಂತಗಳಿವೆ. ಪ್ರಕೃತಿಯ ವರ್ಣನೆಜೊತೆ ನವ್ಯ ವಿಷಯಗಳು ಅವರಕಾವ್ಯದಲ್ಲಿವೆ. ಬೆಳಕು ಅವರಕಾವ್ಯದ ಮೂಲವಾಗಿದೆ.ಅವರ ಕವನ ಸಂಕಲನಕಾವ್ಯಾಕ್ಷಿ’ ಹಾಗೂ ಭಾವಜೀವಿ'ಗಳು ತಾತ್ವಿಕ ನೆಲೆಗಟ್ಟಿನ ಮೇಲೆ ರಚನೆಯಾಗಿವೆಎಂದು ಹೇಳಿದರು. ಖ್ಯಾತಚಿಂತಕರಾದಡಾ. ಲೋಹಿತ ನಾಯ್ಕರ ಬಹುಮಾನ ಪ್ರದಾನ ಮಾಡಿ ಮಾತನಾಡಿ, ಕನ್ನಡದಯುವ ಲೇಖಕರಿಂದಆಹ್ವಾನಿತಎಲ್ಲಾ ಕಥೆಗಳನ್ನು ಸಂಗ್ರಹಿಸಿ ಪುಸ್ತಕದರೂಪದಲ್ಲಿ ಪ್ರಕಟಿಸಿ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವುದುಅಗತ್ಯವಿದೆಎಂದು ಹೇಳಿದರು. ಕಥಾ ವಿಭಾಗದ ನಿರ್ಣಾಯಕರಾದ ಶ್ರೀಧರ ಗಸ್ತಿ ಮಾತನಾಡಿ, ಕಥೆಗಳಲ್ಲಿ ಹುಟ್ಟುವಿಕೆ ಹಾಗೂ ಕಟ್ಟುವಿಕೆ ಮುಖ್ಯ.ಇಲ್ಲಿಕಥೆಗಾರ ಕೆಲವೊಮ್ಮೆ ಪಾತ್ರಧಾರಿಯಾಗಿ ಭಾವನೆ ಅಭಿವ್ಯಕ್ತಗೊಳಿಸಬೇಕಾಗುತ್ತದೆ. 32 ಕಥೆಗಳಲ್ಲಿ ಸಂಸ ಕಥೆ ಮನೋಜ್ಞವಾಗಿದ್ದುಎಲ್ಲರೂಓದಲೇಬೇಕಾದುದಾಗಿದೆಎಂದರು. ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಚೆನ್ನವೀರಕಣವಿಯವರುತಮ್ಮ ಮೇರು ಕಾವ್ಯಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ.ಕಾವ್ಯದಓದು ಮುಖ್ಯ.ಕಣವಿಯವರಕಾವ್ಯಓದಿದವರು ತತ್ವಜ್ಞಾನಿಗಳಾಗಲು ಸಾಧ್ಯ.ಕವಿಗೆ ಸಂವೇದನೆ ಮುಖ್ಯಎಂದರು. ವೇದಿಕೆ ಮೇಲೆ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ, ದತ್ತಿದಾನಿ ಶಿವಾನಂದ ಕಣವಿ ಇದ್ದರು. ದತ್ತಿ ಅಂಗವಾಗಿ ಕನ್ನಡದಯುವ ಲೇಖಕರಿಗೆ ಆಯೋಜಿಸಿದ್ದ ಚೆನ್ನವೀರಕಣವಿ ಕಾವ್ಯ ಸ್ಪರ್ಧೆಯಲ್ಲಿಚಾಮರಾಜ ನಗರದಆರ್. ದಿಲೀಪ್‍ಕುಮಾರಅವರಅಮೃತವರ್ಷಿಣಿ’ ಕಾವ್ಯ ಪ್ರಥಮ ಬಹುಮಾನ, ಯಾದಗೀರನ ಕು.ಮಹೇಶ್ವರಿ, ಅಲ್ಕೂರಅವರ ಮೌನ ಅಳು' ಕಾವ್ಯ ದ್ವೀತೀಯ ಬಹುಮಾನ ಹಾಗೂ ಧಾರವಾಡದ ಕು.ಕವಿತಾ ವೀರನಗೌಡ ಪಾಟೀಲ ಅವರಉರ್ಮಿಳೆ’ ಕಾವ್ಯತೃತೀಯ ಬಹುಮಾನ ಪಡೆದವು ಮತ್ತುಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿರೋಣದಡಾ. ಅಂದಯ್ಯಅರವಟಗಿಮಠಅವರ ದೈವ ದೈವಗಳಾಚೆ' ಕಥೆ ಪ್ರಥಮ ಬಹುಮಾನ, ಅನಂತಕುಣಿಗಲ್‍ಅವರಸಂಸ’ ಕಥೆ ದ್ವಿತೀಯ ಬಹುಮಾನ ಹಾಗೂ ಸಂಜೀವಜಗ್ಲಿ, ಮಾನವಿ ಅವರ `ಸಾಲಿ’ ಕಥೆತೃತೀಯ ಬಹುಮಾನ ಪಡೆದವು. ಕಾವ್ಯ ಮತ್ತುಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಯುವ ಲೇಖಕರನ್ನು ಗೌರವಿಸಿ ಸನ್ಮಾನಿಸಲಾಯಿತು.ಚಾಮರಾಜ ನಗರದಆರ್.ದಿಲೀಪ್‍ಕುಮಾರ ಬಹುಮಾನಿತರ ಪರವಾಗಿ ಮಾತನಾಡಿದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಗುರು ಹಿರೇಮಠ ಪರಿಚಯಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಂಕರ ಕುಂಬಿ ನಿರೂಪಿಸಿದರು.ಸತೀಶತುರಮರಿ ವಂದಿಸಿದರು.
ಕಾರ್ಯಕ್ರಮದಲ್ಲಿಡಾ.ಶೈಲಜಾಅಮರಶೆಟ್ಟಿ, ಶಿವಾನಂದ ಭಾವಿಕಟ್ಟಿ, ಕರುಣಪ್ರಸಾದಕಣವಿ, ರಂಜನಾ ಗೋದಿ, ಡಾ.ಅಶೋಕ ಗೋದಿ, ಎಸ್.ಎಂ.ಶಿವಪ್ರಸಾದ, ಡಾ.ಆನಂದ ಪಾಟೀಲ, ನಿಂಗಣ್ಣಕುಂಟಿ, ಸಿ.ಯು.ಬೆಳ್ಳಕ್ಕಿ, ನಿಂಗಪ್ಪ ಮಾಯಕೊಂಡ, ಮಹಾಂತೇಶ ನರೇಗಲ್, ಬಿ.ಎಸ್. ಶಿರೋಳ, ಕೆ.ಎಂ.ಅಂಗಡಿ, ಸಿ.ಎಸ್. ಮಾಳವಾಡ ಸೇರಿದಂತೆಕಣವಿ ಪರಿವಾರದವರು ಉಪಸ್ಥಿತರಿದ್ದರು.