ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
ಕಲಬುರಗಿ : ಜೂ.30:ಇಂದಿನ ಆಧುನಿಕ ಯುಗದಲ್ಲಿ ಆರೋಗ್ಯ ಕಡೆಗೆ ಹೆಚ್ಚಿನ ಕಾಳಜಿ ನೀಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರುನ್ನಮ ಐಎಎಸ್ ಅವರು ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಕ್ಯಾನ್ಸರ್ ಅವೆರನೆಸ್ ವಿಕ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಉದ್ಘಾಟಕರಾಗಿ ಮಾತನಾಡಿದರು. ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಿದರೆ ಹಲವು ಕ್ಯಾನ್ಸರ್‍ಗಳನ್ನು ಗುಣಪಡಿಸಬಹುದು. ಯಾವುದೇ ರೋಗಗಳು ಬರುವ ಲಕ್ಷಣಗಳು ಕಂಡು ಬಂದರೆ ತಡಮಾಡದೆ ವೈದ್ಯರನ್ನು ಕಾಣಬೇಕು. ಎಷ್ಟೇ ಕೆಲಸಗಳು ಇದ್ದರೂ ಸಹ ಆರೋಗ್ಯ ಕಡೆಗೆ ಗಮನಹರಿಸುವುದು ಬಹಳ ಮುಖ್ಯವಾಗಿದೆ. ಆರೋಗ್ಯವಾಗಿದ್ದರೆ ಎಲ್ಲವೂ ಸಾಧ್ಯ. ಯುವ ಜನತೆ ಇದರ ಬಗ್ಗೆ ಬಹಳ ಜಾಗರೂಕರಾಗಿಬೇಕು. ಮುಕ್ತವಾಗಿ ವೈದ್ಯರಿಗೆ ತಿಳಿಸಬೇಕು. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಇದೇ ತರಹದ ಅನೇಕ ಆರೋಗ್ಯದ ಕುರಿತು ಕಾರ್ಯಕ್ರಮಗಳು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಂಡು ವಿದ್ಯಾರ್ಥಿಗಳು ತಿಳಿಹೇಳಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಉತ್ತಮ ಆಹಾರ ಸೇವಿಸಬೇಕು ಇದರಿಂದ ಆರೋಗ್ಯವಾಗಿರಬಹುದು. ಆರೋಗ್ಯ ಚೆನ್ನಾಗಿದ್ದರೆ ಉನ್ನತ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಎಚ್ಚರಿಕೆವಹಿಸಬೇಕು ಎಂದು ಹೇಳಿದರು.
ನಂತರ ಎಚ್.ಸಿ.ಜಿ. ಕ್ಯಾನ್ಸರ್ ಸೆಂಟರ್ ಹಾಗೂ ಕಿದ್ವಾಯಿ ಆಸ್ಪತ್ರೆಯ ಮೆಡಿಕಲ್ ಆಂಕಲೋಜಿಸ್ಟ್, ವೈದ್ಯರಾದ ಡಾ.ಶೃತಿ ವಿ ಅವರು ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ರೋಗಗಳು ಮತ್ತು ಅದರ ಪರಿಹಾರ ಕುರಿತು ವಿಶೇಷವಾಗಿ ಮಾತನಾಡಿದರು.
ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಈ ಭಾಗದ ಮಹಿಳೆಯರು ಐಎಎಸ್ ಮತ್ತು ಕೆಎಎಸ್ ಉನ್ನತ ಹುದ್ದೆಗಳಲ್ಲಿರಬೇಕು ಎಂದು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ಕನಸ್ಸಾಗಿದೆ ಅದರಂತೆ ಇತ್ತೀಚಿಗೆ ಮಹಿಳೆಯರು ಇಂತಹ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವುದು ಸಂತೋಷವಾಗಿದೆ. ವಿದ್ಯಾರ್ಥಿನಿಯರು ದೊಡ್ಡ ಕನಸ್ಸು ಮತ್ತು ಗುರಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಹಣ್ಣು ಮತ್ತು ತರಕಾರಿಗಳನ್ನು ಒಳಗೊಂಡಂತೆ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ದುಶ್ಚಟಗಳಿಂದ ದೂರವಿರಬೇಕು, ನಿಯಮಿತವಾಗಿ ದೈಹಿಕ ಚಟುವಟಿಕೆಗಳನ್ನು ಮಾಡಬೇಕು ಅಂದಾಗ ಮಾತ್ರ ಯಾವುದೇ ರೋಗಗಳನ್ನು ಬರದಂತೆ ಎಚ್ಚರಿಕೆವಹಿಸಬಹುದು ಎಂದು ಹೇಳಿದರು.
ವೇದಿಕೆ ಮೇಲೆ ಐಆರ್‍ಸಿಎಸ್ ನ ಶ್ರೀಮತಿ ಭಾಗ್ಯಲಕ್ಷ್ಮೀ, ಎಮ್., ಡಾ.ಪರಮೇಶ್ವರ ಶೆಟಕಾರ ಇದ್ದರು.
ಮಹಾವಿದ್ಯಾಲಯದ ಶ್ರೀಮತಿ ಪದ್ಮಜಾ ವೀರಶೆಟ್ಟಿ ಸ್ವಾಗತಿಸಿದರು, ಐಆರ್‍ಸಿಎಸ್‍ನ ಕಾರ್ಯದರ್ಶಿ ರವೀಂದ್ರ ಶಾಬಾದಿ ಪ್ರಾಸ್ತಾವಿಕ ಮಾತನಾಡಿದರು, ಶ್ರೀಮತಿ ದಾಕ್ಷಾಯಣಿ ಕಾಡಾದಿ ನಿರೂಪಿಸಿದರೆ, ಶ್ರೀಮತಿ ದೀಶಾ ಮೆಹತಾ ವಂದಿಸಿದರು. ಕು.ಅಕ್ಷತಾ ಮತ್ತು ಕು.ಸ್ಫೂತಿ ಪ್ರಾರ್ಥಿಸಿದರು.