ದೂರು, ಅಹವಾಲುಗಳಿಗೆ ಪ್ರತಿದಿನ ಸ್ಪಂದನೆ: ಲಾಡ್
ಧಾರವಾಡ,ಜೂ30: ತಾವು ಸಚಿವರಾದಾಗಿನಿಂದ ವಾರದ ಬಹುತೇಕ ದಿನಗಳನ್ನು ನನ್ನ ಮತಕ್ಷೇತ್ರ ಹಾಗೂ ಜಿಲ್ಲೆಯ ಜನರ ಮಧ್ಯದಲ್ಲಿದ್ದು, ಅವರ ದೂರು, ಅಹವಾಲುಗಳಿಗೆ ಪ್ರತಿದಿನ ಸ್ಪಂದಿಸುತ್ತಿದ್ದೇನೆ. ನಿತ್ಯ ಜನತಾದರ್ಶನ ನಡೆಸುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ, ಕಾರ್ಮಿಕ ಇಲಾಖೆ ಸಚಿವರು ಆಗಿರುವ ಕಲಘಟಗಿ ಶಾಸಕರಾದ ಸಂತೋಷ ಲಾಡ ಹೇಳಿದರು.
ಅವರು ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜನ ಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಜನರ ಮಧ್ಯದಲ್ಲಿದ್ದು ಜನರ ಸಮಸ್ಯೆಗಳಿಗೆ ನಿತ್ಯ ಧ್ವನಿ ಆಗಿದ್ದೇವೆ. ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ, ಅಲ್ಲಿನ ಜನಪ್ರತಿನಿಧಿಗಳ, ಗ್ರಾಮಸ್ಥರೊಂದಿಗೆ ಗ್ರಾಮದ ಸಮಸ್ಯೆ, ಬೇಡಿಕೆಗಳನ್ನು ಚರ್ಚಿಸಿ, ಪರಿಹಾರ ಕಲ್ಪಿಸಲಾಗಿದೆ. ನಾನು ಒರ್ವ ಸಚಿವನಾಗಿ, ರಾಜ್ಯದಲ್ಲಿ ಮೊದಲ ಬಾರಿಗೆ ಮತಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ, ಸ್ವತಃ 28 ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಜನಸಂಪರ್ಕ ಸಭೆ ಜರುಗಿಸಿದ್ದೇನೆ ಎಂದು ಸಚಿವರು ತಿಳಿಸಿದರು.
ಕಲಘಟಗಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು 263 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಶೇ.40 ರಷ್ಟು ಅರ್ಜಿಗಳನ್ನು ಸ್ಥಳದಲ್ಲಿ ಪರಿಹರಿಸಲಾಗಿದೆ. ಉಳಿದಂತೆ ಬಹುತೇಕ ಅರ್ಜಿಗಳು ವಾಸಕ್ಕೆ ಮನೆ ಬೇಕು, ಜಮೀನು ಸರ್ವೆ ಮಾಡಿಸಿ, ಪೌತಿ, ಪೆÇಡಿಗಾಗಿ ಅರ್ಜಿ ಸಲ್ಲಿಕೆ ಆಗಿವೆ. ಇವುಗಳನ್ನು ಸಹ ಮುಂದಿನ ದಿನಗಳಲ್ಲಿ ನಿಯಮಾನುಸಾರ, ಕಾನೂನುಬದ್ದವಾಗಿ ಪರಿಶೀಲಿಸಿ, ಇತ್ಯರ್ಥ ಪಡಿಸಲಾಗುವುದು ಎಂದು ಸಚಿವರು ಹೇಳಿದರು.
ವಿಶೇಷಚೇತನ ಕಂಡು ಕಣ್ಣಿರಾದ ಸಚಿವರು: ವಯಸ್ಕ ಮಗ ವಿಶೇಷಚೇತನನಿದ್ದು, ಏಳಲು, ಅಡ್ಡಾಡಲು ಬರುವುದಿಲ್ಲ. ಮನೆಯ ಆರ್ಥಿಕ ಸ್ಥಿತಿ ಚನ್ನಾಗಿಲ್ಲ. ಮಗನನ್ನು ಸಾಕಿ, ಸಲುಹಲು ಸಹಾಯ ಮಾಡಿ ಎಂದು ವಿಶೇಷಚೇತನನ ತಾಯಿ ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಅವರು ಇಂದಿನ ಜಿಲ್ಲಾಧಿಕಾರಿಗಳ ಜನಸ್ಪಂದನದಲ್ಲಿ ಉಸ್ತುವಾರಿ ಸಚಿವರಲ್ಲಿ ವಿನಂತಿಸಿದರು.
ಅವರ ಪರಿಸ್ಥಿತಿ ನೋಡಿ, ಕಣ್ಣಿರಾದ ಸಚಿವ ಸಂತೋಷ ಲಾಡ ಅವರು, ತಮ್ಮ ಪೌಂಡೇಶನ್‍ದಿಂದ ಸಹಾಯ ಮಾಡುವುದಾಗಿ ತಿಳಿಸಿದರು. ಮತ್ತು ಆರೋಗ್ಯ, ಅಂಗವಿಕಲ ಕಲ್ಯಾಣ ಇಲಾಖೆಯಿಂದ ಯೋಜನಗಳ ಸಹಾಯ ಮಾಡಿಸುವುದಾಗಿ ಸಚಿವರು ತಿಳಿಸಿದರು. ಅಗತ್ಯ ಚಿಕಿತ್ಸೆ, ಔಷಧಿ ನೀಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಎಂಬುವವರ ಮಗ ನಾಗರಾಜ ಅಂಗವಿಕಲನಿದ್ದು, ನಡೆದಾಡಲು ಬರುವುದಿಲ್ಲ. ತಾಯಿಯನ್ನು ಬಿಟ್ಟು ಆತನಿಗೆ ಯಾರು ಇಲ್ಲ. ಕಾರಣ ಸರಕಾರದಿಂದ ವಿಶೇಷ ಸೌಲಭ್ಯವನ್ನು ನೀಡಬೇಕು ಎಂದು ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಅವರು ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಸಲ್ಲಿಸಿದ್ದರು.
ಅನ್ನಭಾಗ್ಯ ಯೋಜನೆ ತಲುಪದ ಪಡೀತರದಾರರಿಗೆ ಆಧಾರ ಕೆವೈಸಿ ಅಭಿಯಾನ ಮಾಡಿ: ಅನ್ನಭಾಗ್ಯ ಯೋಜನೆಯ ನೇರ ನಗದು ಹಣ ಜಮೆ ಆಗದ ಪ್ರಕರಣಗಳಲ್ಲಿ ಆಧಾರ ಜೋಡಣೆಯ ಮತ್ತು ಬ್ಯಾಂಕ್ ಹೊಸ ಖಾತೆ ತೆರೆಯಲು ಅನುಕೂಲವಾಗುವಂತೆ ಆಯ್ದ ನಗರ ಹಾಗೂ ಗ್ರಾಮೀಣ ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಜೋಡಣೆಯ ಸಲುವಾಗಿ ಜುಲೈ 1 ರಿಂದ 7 ರ ವರೆಗೆ ಸಪ್ತಾಹ ಅಭಿಯಾನ ಜಿಲ್ಲೆಯಲ್ಲಿ ಆಯೋಜಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸಚಿವ ಸಂತೋಷ ಲಾಡ ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೆÇಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ತಾಲೂಕಿನ ಉಸ್ತುವಾರಿ ಅಧಿಕಾರಿ ಆಗಿರುವ ಹಿರಿಯ ಕೆಎಎಸ್ ಅಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಗ್ಯಾರಂಟಿ ಯೋಜನೆ ಅನುμÁ್ಠನ ಸಮಿತಿ ಜಿಲ್ಲಾ ಅಧ್ಯಕ್ಷ ಶ್ಯಾನಪ್ಪಗೌಡ ಪಾಟೀಲ, ತಾಲೂಕು ಅಧ್ಯಕ್ಷ ಬಸವರಾಜ ಬಾವಕರ ಸೇರಿದಂತೆ ಮೊದಲಾದವರು ಇದ್ದರು.