ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲು ದ ಸಂ ಸ ಆಗ್ರಹ
ಜೇವರ್ಗಿ:ಜೂ.30: ರಾಜಾಸ್ಥಾನದ ಕೋಟ ಜಿಲ್ಲೆಯ ಬರೋದಿಯಾ ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ತಳಿಗೆ ಅವಮಾನ ಮಾಡಿದ ಕೀಡಿಗೆಡಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯವರು ರಾಷ್ಟ್ರಪತಿಗಳಿಗೆ ಆಗ್ರಹಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆಯ ಮುಖಾಂತರ ಆಗಮಿಸಿ ಜೇವರ್ಗಿ ತಹಸೀಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಬುದವಾರ ಮನವಿ ಸಲ್ಲಿಸಿದರು.
ರಾಜಸ್ಥಾನದಲ್ಲಿ ಬಿಜೆಪಿ ಸರಕಾರ ಅಧೀಕಾರಕ್ಕೆ ಬಂದು 7 ತಿಂಗಳಲ್ಲಿ ಅನೇಕ ರೀತಿಯ ದೌರ್ಜನ್ಯಗಳು ಅಲ್ಲಿನ ದಲಿತ ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿದೆ. ಅದರಂತೆ 23 ಜುನ 2024 ರಂದು ಕೋಟ ಜಿಲ್ಲೆಯ ಬರೋಧಿಯಾ ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ತಳಿಗೆ ಅಪಮಾನ ಮಾಡಿದ ಘಟನೆ ನಡೆದಿದೆ. ಅಲ್ಲಿನ ಸರಕಾರ ಕಣ್ಣು ಮುಚ್ಚಿ ಕುಳಿತಂತಿದೆ. ಈ ಘಟನೆ ಮನುಕುಲಕ್ಕೆ ನಾಚಿಕೆಗೆಡಿನ ಸಂಗತಿ. ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟಮಹಾತ್ಮನಿಗೆ ಈರಿತಿಯ ಅವಮಾನ ಮಾಡುತ್ತಾರೆ ಎಂದರೆ ಅವರು ಈ ದೇಶದಲ್ಲಿ ಬದುಕಲು ಯೋಗ್ಯರಲ್ಲ. ಕೂಡಲೆ ಅವರನ್ನ ಬಂದಿಸಿ ಗಲ್ಲು ಶಿಕ್ಷೆ ನೀಡಬೇಕು.
ಈ ಘಟನೆಯ ನೈತಿಕ ಹೊಣೆ ಹೊತ್ತು ರಾಜ್ಯಸ್ಥಾನ ಮುಖ್ಯಮಂತ್ರಿ ಭಜನಲಾಲ ಶರ್ಮಾರವರು ರಾಜಿನಾಮೆಯನ್ನ ನೀಡಬೇಕು. ರಾಷ್ಟ್ರಪತಿಗಳ ಆಡಳಿತ ಜಾರಿಯಾಗಬೇಕು. ಅದೇ ಸ್ಥಳದಲ್ಲಿ ಮತ್ತೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಯನ್ನ ಸ್ಥಾಪಿಸಬೇಕು. ಅವಮಾನ ಮಾಡಿದ ಕೀಡಿಗೆಡಿಗಳನ್ನ ಬಂದಿಸಿ ಗಲ್ಲು ಶಿಕ್ಷೆ ನೀಡಬೇಕು. ಮಾನ್ಯ ರಾಷ್ಟ್ರಪತಿಗಳು ಈ ಕೆಲಸವನ್ನು ಬೇಗನೆ ಮಾಡದಿದ್ದರೆ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ತಾಲೂಕ ದಲಿತ ಸಂಘಟನೆಗಳ ಸಮನ್ವಯ ಸಮಿತಿಯವರು ಆಗ್ರಹಿಸಿದರು. ಈ ಸಂದರ್ಭದಲ್ಲಿ
ಈ ಸಂದರ್ಭದಲ್ಲಿ ತಾಲೂಕ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರಾದ ಭೀಮರಾಯ ನಗನೂರ, ಸಿದ್ರಾಮ ಕಟ್ಟಿ ಕೊಳಕೂರ, ಶ್ರೀಹರಿ ಕರಕಳ್ಳಿ, ರವಿ ಕುಳಗೇರಿ, ಸಿದ್ದು ಕೇರುರು, ಶರಣಬಸಪ್ಪ ಲಖಣಾಪೂರ, ಪರಮೇಶ ಬಿರಾಳ, ಶಿವಶರಣ ಆಂದೋಲಾ, ಲಕ್ಷ್ಮಣ ಡೊಳ್ಳೆ, ಅಬ್ದುಲ್ ಗನಿ ರಾವಣ, ಪರಮಾನಂದ ಯಲಗೋಡ, ರೇವಣಸಿದ್ದ ಬಿರಾಳ, ಹಣಮಂತ್ರಾಯ ಟೇಲರ್, ಜಟ್ಟಿಂಗರಾಯ ಮಂದ್ರವಾಡ, ರವಿ ಸರಕಾರ, ಸಾಯಬಣ್ಣ, ಸಂಗಣ್ಣ ಹೊಸ್ಮನಿ ಸೇರಿದಂತೆ ಅನೇಕರಿದ್ದರು.