ಹೆಚ್ಚುತ್ತಿರುವ ತಾಪಮಾನವನ್ನು ತಗ್ಗಿಸಲು ಗಿಡ ಮರಗಳನ್ನು ಬೆಳೆಸಿರಿ : ಶಾಸಕ ಲಕ್ಷ್ಮಣ ಸವದಿ
ಅಥಣಿ :ಜೂ.30: ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಗಿಡ ಮರಗಳನ್ನು ಹಚ್ಚುವುದು ಕೇವಲ ಪರಿಸರ ದಿನಾಚರಣೆಗೆ ಸೀಮಿತವಾಗಬಾರದು. ಗಿಡಮರಗಳನ್ನು ನೆಟ್ಟು ಪೆÇೀಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರವನ್ನು ಬೆಳೆಸುವುದರಿಂದ ಸಕಾಲಕ್ಕೆ ಸಮೃದ್ಧವಾದ ಮಳೆ ಬರುತ್ತದೆ ಮತ್ತು ಹೆಚ್ಚುತ್ತಿರುವ ತಾಪಮಾನವನ್ನು ತಗ್ಗಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಇಲ್ಲಿನ ಆರ್. ಎಚ್ ಕುಲಕರ್ಣಿ ಸಭಾಂಗಣದಲ್ಲಿ ಅಥಣಿ ಮತ್ತು ಕಾಗವಾಡ ತಾಲೂಕು ಸಹಕಾರಿ ಸಂಘಗಳ ಹಾಗೂ ವಿವಿಧ ಉದ್ದೇಶಗಳ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಬ್ಯಾಂಕುಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಗ್ರಾಮಗಳಲ್ಲಿ ಸಹಕಾರ ಸಂಘಗಳ ಮುಖಾಂತರ 5000 ಸಸಿಗಳ ವಿತರಣೆ ಹಾಗೂ ಪರಿಸರ ಸಂರಕ್ಷಣಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವರ್ಷ ಅರಣ್ಯ ಇಲಾಖೆಯಿಂದ ಸಾವಿರಾರು ಗಿಡಗಳನ್ನ ನೆಡಲಾಗುತ್ತದೆ. ಆ ಗಿಡಗಳು ಬೆಳೆದಿದ್ದರೆ ಊರಿಗೊಂದು ವನ ನಿರ್ಮಾಣವಾಗುತ್ತಿತ್ತು, ಅವರು ನೆಡುವ ಗಿಡಗಳನ್ನ ಪ್ರತಿಯೊಬ್ಬ ಸಾರ್ವಜನಿಕರು ಸಂರಕ್ಷಣೆ ಮಾಡಬೇಕು. ಆದರೆ ಸಾರ್ವಜನಿಕರು ಅವುಗಳನ್ನ ಸರಿಯಾಗಿ ಪೆÇೀಷಣೆ ಮಾಡದೇ ಇರುವುದರಿಂದ ಹಚ್ಚಿರುವ ಗಿಡಗಳು ಒಣಗಿ ಹೋಗುತ್ತಿವೆ. ಪರಿಸರ ದಿನಾಚರಣೆ ಕೇವಲ ಗಿಡ ನೆಡುವುದಕ್ಕೆ ಸೀಮಿತವಾಗಿದೆ. ಗಿಡಗಳನ್ನು ನೆಟ್ಟು ಪೆÇೀಷಿಸುವಂತಹ ಸಂಸ್ಥೆಗಳಿಗೆ ಸಸಿಗಳನ್ನ ವಿತರಿಸಬೇಕು ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿಯ ಸಹಕಾರಿ ಸಂಘಗಳ ಸಂಯುಕ್ತ ನಿಬಂಧಕರಾದ ಡಾ. ಸುರೇಶ್ ಗೌಡ ಮಾತನಾಡಿ ವಿಜ್ಞಾನ ತಂತ್ರಜ್ಞಾನ ಬೆಳದಂತೆ ಮಾನವ ತನ್ನ ಸ್ವಾರ್ಥಕ್ಕಾಗಿ ಗಿಡಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡಿದ್ದಾನೆ. ತಂತ್ರಜ್ಞಾನದ ಅನೇಕ ದುಷ್ಪರಿಣಾಮಗಳಿಂದ ಪರಿಸರದ ಮೇಲೆ ಪರಿಣಾಮವಾಗುತ್ತಿದೆ. ಗಿಡಮರಗಳನ್ನು ಹೆಚ್ಚಿಗೆ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಸಹಕಾರಿ ಸಂಘಗಳ ಮೂಲಕ ಪರಿಸರ ಸಂರಕ್ಷಣಾ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ಅಥಣಿ ಮತ್ತು ಕಾಗವಾಡ ಎರಡು ತಾಲೂಕುಗಳಲ್ಲಿ 5000 ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಅನೇಕ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಸಂಗಮೇಶ ಹಚಡದ ಉಪನ್ಯಾಸ ನೀಡುತ್ತಾ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಇರುತ್ತದೆ. ಅರಣ್ಯ ಇಲಾಖೆಯವರು ನಮಗೆ ಸಸಿಗಳನ್ನು ವಿತರಿಸುವುದಲ್ಲದೆ, ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಗಿಡಮರಗಳನ್ನು ನೆಟ್ಟಿರುತ್ತಾರೆ. ಸಾರ್ವಜನಿಕರು ಅವುಗಳಿಗೆ ನೀರು ಉಣಿಸುವ ಮೂಲಕ ಪರಿಸರ ಬೆಳವಣಿಗೆಗೆ ಸಹಕರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಎಆರ್ ಸಿಎಸ್ ಮಲ್ಲಪ್ಪ ರಾವುತನವರ. ತಾಲೂಕ ಸಹಕಾರ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ನೂಲಿ, ವಲಯ ಸಾಮಾಜಿಕ ಅರಣ್ಯಾಧಿಕಾರಿ ಉಮೇಶ ಪ್ರಧಾನಿ. ಶ್ರೀನಿವಾಸ ಸಾರವಾಡ, ಶಂಕರ ನಂದೇಶ್ವರ. ಧನಂಜಯ ಪಾಠಣಕರ. ಸೇರಿದಂತೆ ವಿವಿಧ ಸಹಕಾರಿ ಸಂಘದ ಧುರೀಣರು ಉಪಸ್ಥಿತರಿದ್ದರು.
ಅಥಣಿ ಮತ್ತು ಕಾಗವಾಡ ತಾಲೂಕುಗಳಲ್ಲಿ ಸಹಕಾರಿ ಸಂಘಗಳ ಒಕ್ಕೂಟದಿಂದ ವಿನೂತನ ಪ್ರಯೋಗ ಮಾಡಲಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪ್ರತಿ ಗ್ರಾಮದಲ್ಲಿ ಎರಡರಿಂದ ನಾಲ್ಕು ಸಹಕಾರಿ ಸಂಘಗಳು ಇರುತ್ತವೆ. ಪ್ರತಿ ಸಂಘದ ಸದಸ್ಯರು ಮತ್ತು ಸಿಬ್ಬಂದಿ ಕನಿಷ್ಠ 10 ರಿಂದ 15 ಗಿಡಗಳನ್ನ ದತ್ತು ಪಡೆದುಕೊಂಡು ತಮ್ಮ ಸಂಘದ ಆವರಣ, ಶಾಲೆ, ದೇವಸ್ಥಾನ, ರಸ್ತೆಗೆ ಬದಿಗೆ ಹೀಗೆ ಅನೇಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು, ಅವುಗಳಿಗೆ ಸಕಾಲಕ್ಕೆ ನೀರುಣಿಸಿ ಪೆÇೀಷಿಸುವಂತಹ ಕಾರ್ಯವನ್ನು ಸಹಕಾರಿ ಸಂಘದ ಸದಸ್ಯರು ಕೈಗೊಳ್ಳಬೇಕು