ಒಂದು ದೇಶ ಒಂದು ಚುನಾವಣೆ ನಿರ್ಧಾರ ಕೈ ಬಿಡಲು ಡಿಎಸ್‌ಎಸ್ ಆಗ್ರಹ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೭:ಲೋಕಸಭೆ ವಿರೋಧ ಪಕ್ಷದ ನಾಯಕÀ ರಾಹುಲ್ ಗಾಂಧಿ ಮೀಸಲಾತಿ ವಿರೋಧಿ ಎಂಬAತೆ ಬಿಂಬಿಸುತ್ತಿರುವ ಬಿಜೆಪಿ ಜೆಡಿಎಸ್ ನಡೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಾ. ಡಿ.ಜಿ. ಸಾಗರ ಬಣ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಡಾ. ಅಂಬೇಡ್ಕರ ವೃತ್ತದಿಂದ ಬೃಹತ್ ಪ್ರತಿಭಟನೆ ಆರಂಭಗೊAಡು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಒಂದು ದೇಶ ಚುನಾವಣಿಯ ಜಾರಿಗೆ ನಿರ್ಧರಿಸಿದ ಕೇಂದ್ರ ಸರಕಾರ ತನ್ನ ನಿರ್ಧಾರ ವಾಪಸ್ ಪಡೆಯಬೇಕು ಹಾಗೂ ಶಾಸಕ ಮುನಿರತ್ನ ಜಾತಿನಿಂದನೆ ಜೀವ ಬೆದರಿಕೆ ಮಹಿಳೆ ಮೇಲೆ ಅತ್ಯಾಚಾರ ಎಸಗಿದರೆನ್ನಲಾದ ಅವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿ ಧರಣಿ ಮೂಲಕ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಅವರಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ, ಜೆಡಿಎಸ್ ಬಿಂಬಿಸುತ್ತಿರುವುದು ಸರಿಯಲ್ಲ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕÀ ಸಿದ್ದು ರಾಯಣ್ಣವರ ಮಾತನಾಡಿ, ಒಂದು ದೇಶ ಒಂದು ಚುನಾವಣಿ ಕೇಂದ್ರ ಸರ್ಕಾರದ ಅಜೆಂಡಾದ ಭಾಗ. ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಇದನ್ನು ಅನುಷ್ಠಾನ ಮಾಡುವುದಕ್ಕೆ ಸಾಧ್ಯವೆ ಇಲ್ಲ. ಆಡಳಿತರೂಢ ಬಿಜೆಪಿಯು ಗುಪ್ತ ಅಜೆಂಡಾವನ್ನು ಒಳಗೊಂಡಿರುವ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪವನ್ನು ಸಂಸತ್ ಒಳಗೆ ಮತ್ತು ಹೊರಗೆ ದೇಶದ ಜನಾಭಿಪ್ರಾಯವೂ ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆಗೆ ವಿರುದ್ಧವಾಗಿದೆ.
ಒಂದು ದೇಶ ಚುನಾವಣೆಯ ವ್ಯವಸ್ಥೆಯ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಲೋಕಸಭೆ ಇಲ್ಲವೇ ವಿಧಾನಸಭೆಯಲ್ಲಿ ಅಡಳಿತರೂಢ ಪಕ್ಷ ವಿಶ್ವಾಸ ಮತ ಗಳಿಸಲು ಸೋತರೆ ಎದುರಾಗುವ ಬಿಕ್ಕಟ್ಟಿಗೆ ಪ್ರಸ್ತಾಪದಲ್ಲಿ ಪರಿಹಾರವಿಲ್ಲ. ಇಡೀ ದೇಶದಲ್ಲಿ ಒಂದೇ ಬಾರಿ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಗಳನ್ನು ನಡೆಸುವ ಶಕ್ತಿ ಸಾಮರ್ಥ್ಯ ಚುನಾವಣೆ ಆಯೋಗಕ್ಕೆ ಇಲ್ಲ. ನಮ್ಮ ಚುನಾವಣಾ ವ್ಯವಸ್ಥೆಯನ್ನು ದುಪ್ಪಟ್ಟು ಪ್ರಮಾಣದಲ್ಲಿ ವಿಸ್ತರಿಸಬೇಕಾಗುತ್ತದೆ. ಇವೆಲ್ಲವೂ ಅವಸರದಿಂದ ಮಾಡುವ ಕೆಲಸ ಅಲ್ಲ. ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕಾದರೆ ಮೊದಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಇದರ ಜೊತೆಗೆ ಸಂವಿಧಾನದ ಕೈ ತಿದ್ದುಪಡಿ ತರಬೇಕಾಗುತ್ತದೆ. ಇವೆಲ್ಲವೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಗೊತ್ತಿದ್ದರೂ ಕೇವಲ ಜನರಲ್ಲಿ ಗೊಂದಲವನ್ನು ಹುಟ್ಟು ಹಾಕಿ ತಮ್ಮ ವೈಫÀಲ್ಯವನ್ನು ಮುಚ್ಚಿ ಹಾಕಲು ಈ ಕೆಲಸವನ್ನು ಮಾಡಲಾಗಿದೆ. ರಾಷ್ಟ್ರಪತಿಗಳು ಇದನ್ನೆಲ್ಲವನ್ನು ಗಮನ ಹರಿಸಿ ಇದಕ್ಕೆ ಒಪ್ಪಿಗೆ ನೀಡಬಾರದು ಎಂದು ಕೇಳಿಕೊಂಡರು.
ಡಿಎಸ್‌ಎಸ್ ವಿಜಯಪುರ ಜಿಲ್ಲಾ ಸಂಚಾಲಕ ವಾಯ್.ಸಿ. ಮಯೂರ ಮಾತನಾಡಿ, ಒಕ್ಕಲಿಗ ಮತ್ತು ದಲಿತ ಸಮುದಾಯಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ಮತ್ತು ಮಹಿಳೆ ಮೇಲೆ ಅತ್ಯಾಚಾರ ಕೇಸವನ್ನು ಎದುರಿಸುತ್ತಿರುವ ಮುನಿರತ್ನ ಶಾಸಕರು ಈಗ ಜೈಲಿನಲ್ಲಿದ್ದಾರೆ. ಇವರ ಮೇಲೆ ಇರುವ ಆರೋಪಗಳನ್ನು ತೀರಾ ಗಂಭೀರ ಸ್ವರೂಪದ್ದಾಗಿವೆ. ಇದನ್ನೆಲ್ಲಾ ತನಿಖೆ ಮಾಡುವದಕ್ಕೆ ವಿಶೇಷ ತನಿಖಾ ತಂಡ ರಚಿಸಿರುವುದು ಸರಕಾರದ ನಿರ್ಧಾರ ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಮಹಾಂತೇಶ ಸಾಸಬಾಳ, ಪ್ರಶಾಂತ ತೊರವಿ, ಅರುಣ ಗವಾರಿ, ಬಾಬು ಗುಡಮಿ, ಶರಣು ಚಲವಾದಿ, ನೀಲಕಂಠ ಹೊಸಮನಿ, ಜೈಭೀಮ ಕುಚಬಾಳ, ಯಮನು ಬೆರನಳ್ಳಿ, ಶಿವು ಗಂಗೂರ, ಅನಿಲ ಹಚ್ಚಾಳ, ಜೈಭೀಮ ತಳಕೇರಿ, ಸುನೀಲ ನಾಗಠಾಣ, ಜಾನು ಗುಡಿಮನಿ, ಜೈಭೀಮ ನಾಯ್ಕೋಡಿ ಮತ್ತಿತರರು ಉಪಸ್ಥಿತರಿದ್ದರು.