ಭ್ರಷ್ಟಾಚಾರ ಹಠಾವೋ, ಹೆಸ್ಕಾಂ ಬಚಾವೋ ಪಾದಯಾತ್ರೆ
ಕೊಲ್ಹಾರ:ಸೆ.೨೭: ರೈತ ಭಾರತ ಪಕ್ಷದ ವತಿಯಿಂದ ಭ್ರಷ್ಟಾಚಾರ ಹಠಾವೋ ಹೆಸ್ಕಾಂ ಬಚಾವೋ ಪಾದಯಾತ್ರೆ ಗುರುವಾರ ಪಟ್ಟಣಕ್ಕೆ ಆಗಮಿಸಿತು.
ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ನೇತೃತ್ವದಲ್ಲಿ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಹಮ್ಮಿಕೊಂಡಿರುವ ಈ ಪಾದಯಾತ್ರೆಯು ವಿಜಯಪುರದಿಂದ ಹುಬ್ಬಳ್ಳಿಯ ಹೆಸ್ಕಾಂ ನಿಗಮಕ್ಕೆ ಮುಕ್ತಾಯಗೊಳ್ಳಲಿದೆ.
ರೈತಾಪಿವರ್ಗದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊAಡು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಪ್ರಮುಖವಾಗಿ ೨೨ ನವೆಂಬರ ೨೦೨೩ ರ ಸಚಿವ ಸಂಪುಟ ಸಭೆಯಲ್ಲಿ ರೈತ ವಿರೋಧಿ ನಿರ್ಣಯ ಹಿಂಪಡೆಯಬೇಕು, ರೈತರಿಗೆ ಶೀಘ್ರವೇ ಕೃಷಿ ಸಂಪರ್ಕ ಯೋಜನೆ ಜಾರಿ ಮಾಡುವುದು, ಕೋಲ್ಹಾರಕ್ಕೆ ಹೆಸ್ಕಾಂ ಉಪವಿಭಾಗಿ ಹಾಗೂ ಮುಳವಾಡಕ್ಕೆ ಹೆಸ್ಕಾಂ ಶಾಖಾ ಕಛೇರಿ ಮಂಜೂರು ಮಾಡುವುದು, ೨೦೧೫ರಲ್ಲಿ ತುಂಬಿದ ಫಲಾನುಭವಿಗಳಿಗೆ ಆರ್.ಆರ್.ಸಂಖ್ಯೆ ಹಾಗೂ ಮೂಲಭೂತ ಸೌಕರ್ಯ ನೀಡುವುದು, ರೈತರಿಗೆ ೧೨ ಘಂಟೆ ೩ ಫೇಸ್ ವಿದ್ಯುತ್ ಪೂರೈಸಬೇಕು, ಸುಟ್ಟ ಟಿಸಿಗಳನ್ನು ೪೮ ಗಂಟೆಗಳಲ್ಲಿ ಕೂಡಿಸುವ ವ್ಯವಸ್ಥೆ ಕಲ್ಪಿಸಬೇಕು, ರೈತರ ತೋಟದ ಮನೆಗಳಿಗೆ ರಾತ್ರಿ ಹೊತ್ತಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕ ನೀಡುವುದು, ಹೆಸ್ಕಾಂ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಬೇಕು, ಅವೈಜ್ಞಾನಿಕ ಕಾಮಗಾರಿಗಳ ತನಿಖೆಯಾಗಬೇಕು, ಮಾಹಿತ ತಂತ್ರಜ್ಞಾನದ ನುರಿತ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ೩೫೬೪ ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕು, ೨೦೦೦ ದಿಂದ ೨೦೧೨ರವರೆಗೆ ಆಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಹಣವನ್ನು ತುಂಬಿದ ರೈತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು, ಹೆಸ್ಕಾಂ ಇಲಾಖೆಯ ೭೫% ಅಧಿಕಾರಿಗಳು ಸ್ವತ: ತಾವೇ ಕಾಮಗಾರಿಗಳನ್ನು ಗುತ್ತಿಗೆ ಹಿಡಿದು ಇಲಾಖೆಯ ಸಾಮಗ್ರಿಗಳನ್ನು ಬಳಸಿ ಕೆಲಸಗಳನ್ನು ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು, ಸುಮಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡುವುದು, ಸರಕಾರ ನೀಡುತ್ತಿರುವ ೨೦೦ ಯೂನಿಟ್ ಉಚಿತ ವಿದ್ಯುತ್ ವಿಷಯವಾಗಿ ಹೆಸ್ಕಾಂ ಕಂಪನಿಗಳು ಸಮರ್ಪಕವಾಗಿ ನೀಡದೆ ಗ್ರಾಹಕರಿಗೆ ವಂಚಿಸುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಹೆಸ್ಕಾಂ ಇಲಾಖೆಗಳ ಅಧಿಕಾರಿಗಳ ಡಿಜಿಟಲ್ ಸಿಗ್ನೆಚರ್ ಅಳವಡಿಸುವುದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿರಲು ಸೂಚನೆ ನೀಡುವುದು, ವಿಂಡ್ ಪವರ್ ಮೀಟರುಗಳು ಬದಲಾವಣೆಯಿಂದ ನಷ್ಟ ಉಂಟು ಮಾಡಿದರ ಬಗ್ಗೆ ಸಮಗ್ರ ತನಿಖೆಯಾಗಬೇಕು, ಅಧಿಕಾರಿಗಳಿಗೆ ನೀಡಿದಂಥ ವಾಹನಗಳು ದುರುಪಯೋಗವಾಗುತ್ತಿದ್ದು ಇದರ ಬಗ್ಗೆ ತನಿಖೆಯಾಗಬೇಕು, ಎಂ.ಟಿ. ಉಪವಿಭಾಗ ಹಾಗೂ ಹೆಸ್ಕಾಂ ಜಾಗೃತದಳದವರು ವಿನಾಕಾರಣ ಗ್ರಾಹಕರಿಗೆ ಕಿರಿಕಿರಿ ಮಾಡುತ್ತಿದ್ದು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ದಿಗಂಬರೇಶ್ವರ ಮಠದ ಪೀಠಾಧಿಪತಿಗಳಾದ ಕಲ್ಲಿನಾಥ ದೇವರು,ತಾಲೂಕ ಹೋರಾಟ ಸಮಿತಿ ಅಧ್ಯಕ್ಷ ಈರಣ್ಣಗೌಡ ಕೋಮಾರ, ಸಿದ್ದಪ್ಪ ಬಾಲಗೊಂಡ, ಸಿ.ಎಂ ಗಣಕುಮಾರ, ಭೀಮಸಿ ಜಲಗೇರಿ ಸಹಿತ ಅನೇಕ ಜನರು ಇದ್ದರು.