೩೦ರಂದು ಯಾದಗಿರಿ ಬಂದ್‌ಗೆ ರಾಜು ಮುಕ್ಕಣ್ಣ ಕರೆ
ವಾಡಿ:ಸೆ.೨೭:ರಾಜ್ಯದಲಿ ದಲಿತರ ಮೇಲೇ ಆಗುತ್ತಿರುವ ಅನ್ಯಾಯ ಅತ್ಯಾಚಾರ ಸರಕಾರದ ನಿರ್ಲಕ್ಷ ಮಾಡುತ್ತಿರುವ ಸರ್ಕಾರ ವಿರುದ್ಧ ಹೋರಾಟಕ್ಕೆ ಎಲರು ಕುಲಬಾಂಧವರು ಹೋರಾಟ ಸನಾದರಾಗಿರಿ ಎಂದು ರಾಜ್ಯ ಮಾದಿಗ ಸಮಾಜದ ಹಿರಿಯ ನಾಯಕ ಹುಟ್ಟು ಹೋರಾಟ ಗಾರ ರಾಜು ಮುಕ್ಕಣ್ಣ ಅವರು ಯಾದಗಿರಿ ಬಂದಗೆ ಕರೆ ನೀಡಿದ್ದಾರೆ ಇಂದು ವಾಡಿ ಪಟಣ್ಣದಲ್ಲಿ ಮಾತನಾಡಿದ ಮುಕ್ಕಣ್ಣ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿAದ್ ದಲಿತರು ಮಾದಿಗ ಜನಾಂಗದ ಜನರು ನೇಮದಿಯಿಲ ಅನೇಕ ಗ್ರಾಮದಲಿ ದಲಿತರಿಗೆ ಅತ್ಯಾಚಾರ ಕೊಲೆ ಬೆದರಿಕೆ ಹಾಗು ಇನಿತರ ಸಮಸ್ಯೆ ಆದರು ಸರಕಾರ ಕಣ್ಣು ಮುಚ್ಕೊಂಡು ಕುಂತಿದೆ ನಾವು ಅದನ್ನು ಸಹಿಸಲ್ಲ ಮಾದಿಗ ಜನಾಂಗದ ನ್ಯಾಯ ಸಿಗುವರೆಗೆ ಹೋರಾಟ ನಮದು ಪ್ರಾಣ ಹೋದರು ಭಯವಿಲ್ಲ ನನ್ನ ಸಮಾಜಕ್ಕೆ ನ್ಯಾಯ ಸಿಗಬೇಕೆಂದರು.
ಸಮಸ್ತ ನನ್ನ ಕುಲಬಾಂಧವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ದಿನಾಂಕ ೩೦ ರಂದು ಯಾದಗಿರಿ ಬಂದ ಕರೆಯಲಾಗಿದೆ, ವಿಶೇಷವಾಗಿ ಸುರಪುರ ತಾಲೂಕಿನಲ್ಲಿ ಮಾದಿಗರಿಗೆ ಆಗಿರತಕ್ಕಂತ ಅನ್ಯಾಯ ಸಾಮಾಜಿಕ ಬಹಿಷ್ಕಾರ ಒಬ್ಬ ವಿಕಲಾಂಗ ಬಾಲಕಿಯ ಮೇಲೆ ಅತ್ಯಾಚಾರ ಇನ್ನಿತರ ಹೋರಾಟಗಳು ಮುಂದೆ ಇಟ್ಟುಕೊಂಡು ನನ್ನ ಬಾಂಧವರು ಯಾದಗಿರಿ ಜಿಲ್ಲೆಯಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಈ ಕಾರ್ಯಕ್ರಮದಲ್ಲಿ ಹಾಗೂ ಈಗಾಗಲೇ ಆದೇಶದ ಅನುಸಾರ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣಕ್ಕೆ ಆಗ್ರಹಿಸಿ ಕರ್ನಾಟಕ ಸರ್ಕಾರಕ್ಕೆ ಒತ್ತಾಯ ಮಾಡಲು ನಾವೆಲ್ಲರೂ ಭಾಗಿಯಾಗಿ ಸಮಾಜದ ಋಣವನ್ನು ತೀರಿಸಬೇಕಾಗಿದೆ ಬಂಧುಗಳೇ ಇದರಲ್ಲಿ ಯಾವುದೇ ಸಂಘಟನೆ ಆಗಿರುವುದು, ರಾಜಕೀಯ ಆಗಿರಬಹುದು, ತರದೆ ಮಾದಿಗರ ಅಳಿವು ಉಳಿವಿನ ಪ್ರಶ್ನೆಯಾಗಿದ್ದು ನಾವೆಲ್ಲರೂ ಭಾಗಿಯಾಗಬೇಕೆಂದರು.