ದಸರಾ ಕ್ರೀಡಾಕೂಟ: ಆಶನಾಳ ನೇತಾಜಿ ಸುಭಾಶ್ಚಂದ್ರ ಬೋಸ್ ಯುವಕ ಸಂಘ ವಿಭಾಗ ಮಟ್ಟಕ್ಕೆ ಆಯ್ಕೆ
ಯಾದಗಿರಿ,ಸೆ.೨೭- ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಆಶನಾಳ ಗ್ರಾಮದ ನೇತಾಜಿ ಸುಭಾಶ್ಚಂದ್ರ ಬೋಸ್ ಯುವಕ ಸಂಘದ ತಂಡಗಳು ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿವೆ.
ಗುರುವಾರ ದಿನಾಂಕ ೨೬/೦೯/೨೦೨೪ ಜರುಗಿದ ದಸರಾ ಆಟೋಟಗಳಲ್ಲಿ ಭಾಗಿಯಾದ ಸಂಘದ ಯುವತಿಯರು ಉದ್ದಜಿಗಿತದಲ್ಲಿ ಕು| ಸುಜಾತಾ ಪ್ರಥಮ ಮತ್ತು ಕು| ಅನ್ನಪೂರ್ಣ ದ್ವಿತಿಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ
ವಾಲಿಬಾಲ್ ಪಂದ್ಯಾವಳಿಯಲ್ಲಿ ಸಂಘದ ಈ ತಂಡ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಯಿತು. ತಂಡದ ನಾಯಕಿ ಕು| ಸುಜಾತಾ, ರೇಣುಕಾ, ಅನ್ನಪೂರ್ಣ, ಐಶ್ವರ್ಯ, ಸಾಬಮ್ಮ, ರಕ್ಷಿತಾ, ಗಂಗಮ್ಮ, ಅಕ್ಷತಾ, ನಿರ್ಮಲಾ, ಪೂಜಾ ಅವರನ್ನೊಳಗೊಂಡ ತಂಡ ಗೆಲುವು ಸಾಧಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆಯಿತು.
ಯುವತಿಯರ ಸಾಧನೆಗೆ ಆಶನಾಳ ಗ್ರಾಮದ ಮುಖಂಡರಾದ ಜಗದೀಶಗೌಡ ಪೊಲೀಸ್ ಪಾಟೀಲ್, ರಾಮಸಮುದ್ರ ಗ್ರಾಪಂ ಉಪಾಧ್ಯಕ್ಷ ಆನಂದ ಸಣ್ಣನಾಗಪ್ಪನೋರ್, ತಂಡದ ಕೋಚ್ ಜಾವೇದ್ ಅಹ್ಮದ್, ಮುಖಂಡರಾದ ರಾಮಣ್ಣ, ಮಲ್ಲಿಕಾರ್ಜುನ, ಶಂಕ್ರಪ್ಪ, ಶಶಿ, ಖಂಡಪ್ಪ ಸಾಬಣ್ಣ ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿ ಉನ್ನತ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.