ಯುವಕರಿಂದ ಮಾತ್ರ ವಿಕಸಿತ ಭಾರತ ಸಾಧ್ಯ: ಕುಲಸಚಿವ ಬಿರಾದಾರ್
ಕಲಬುರಗಿ:ಸೆ.26:ಯುವಕರಿಂದ ಮಾತ್ರ ವಿಕಸಿತ ಭಾರತ ಸಾಧ್ಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್ ಅವರು ಹೇಳಿದರು.
ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ 2024-2025ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಪ್ರವೇಶ ಪಡೆದ ಸ್ನಾತಕ ವಿದ್ಯಾರ್ಥಿಗಳ ಒರಿಯೆಂಟೆಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವು 2047ರ ಒಳಗೆ ಅಭಿವೃದ್ದಿ ಹೊಂದಿದ ದೇಶಗಳ ಪಟ್ಟಿಗೆ ಸೆರುಬೇಕಾದರೆ ಆಧುನಿಕ ಕೌಶಲ್ಯವುಳ್ಳ, ಧೃಡವಾದ ಇಚ್ಚಾಶಕ್ತಿಯಿರುವ, ಉತ್ಸಾಹಿ ಯುವಕರು ಬಹುಮುಖ್ಯವಾದ ಪಾತ್ರ ವಹಿಸಲಿದ್ದಾರೆ. ಇಂದು ವಿಶ್ವವಿದ್ಯಾಲಯಗಳು ಯುವಕರ ಕೌಶಲ್ಯ ಇನ್ನಷ್ಟು ವೃದ್ದಿಸಿ ವಿಕಸಿತ ಭಾರತ ಸಾದನೆಗೆ ತಯ್ಯಾರಿ ಮಾಡಬೇಕಿದೆ ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ನುರತ ಶಿಕ್ಷಕರು, ಆಧುನಿಕ ಮೂಲ ಸೌಕರ್ಯಗಳು ವಿವಿಧ ಸಂಸ್ಖೃತಿ, ಭಾμÉಗಳನ್ನು ಹೊಂದಿದ ವಿದ್ಯಾರ್ಥಿಗಳ ಜ್ಞಾನ ಕೇಂದ್ರವಾಗಿರುವುದರಿಂದ ಇದು ವಿದ್ಯಾರ್ಥಿಗಳ ಸವಾರ್ಂಗಿಣ ಅಭಿವೃದ್ದಿ ಸಾಧಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿದೆ. ನಿವೇಲ್ಲರೂ ಬೆರೆ ಬೆರೆ ರಾಜ್ಯಗಳಿಂದ ನಿಮ್ಮ ಜೀವನದ ಗುರಿಯನ್ನು ಸಾಧಿಸಲು ಮಹತ್ವಕಾಂಕ್ಷೆಯನ್ನು ಇಟ್ಟುಕೊಂಡು ಬಂದಿದ್ದಿರಿ. ಆದ್ದರಿಂಧ ತಾವುಗಳು ತಮ್ಮ ಕಠಿಣ ಪರಿಶ್ರಮ, ಸತತ ಅಧ್ಯಯನ, ಧೃಡವಾದ ಆತ್ಮ ವಿಶ್ವಾಸ, ಪ್ರಾಮಾಣಿಕತೆ, ಧನಾತ್ಮಕ ಚಿಂತನೆ, ಸ್ವಯಂ ಶಿಸ್ತು, ಸ್ವಯಂ ನಿಯಂತ್ರಣ, ದುಶ್ಚಟಗಳಿಂದ ದೂರುವಿದ್ದು, ತಮ್ಮ ಗುರಿ ಸಾಧಿಸಿ. ನಿವೆಲ್ಲರೂ ಇಲ್ಲಿ ಜ್ಞಾನಾರ್ಜನೆಗೆ ಬಂದಿರುವುದರಿಂದ ಜ್ಞಾನ ಸಂಪಾದನೆಯೆ ತಮ್ಮ ಮೂಲ ಮಂತ್ರವಾಗಿರಬೇಕು ಎಂದು ಅವರು ಕರೆ ನೀಡಿದರು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಬಸವರಾಜ್ ಕುಬಕಡ್ಡಿ ಅವರು ಮಾತನಾಡಿ, ವಿಶ್ವವಿದ್ಯಾಲಯವು ಸುಸಜ್ಜಿತ ಗ್ರಂಥಾಲಯ, ವಸತಿನಿಲಯಗಳು, ಇಂಟರನೆಟ್ ಸೌಲಭ್ಯ, ಉತ್ತಮ ಶಿಕ್ಷಕರು, ಓದುವ ವಾತವರಣವನ್ನು ಹೊಂದಿದೆ ಇದನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮ ಓದಿಗೆ ತೊಂದರೆ ಆಗದಿರಲಿಯೆಂದು ಎಲ್ಲ ವಸತಿನಿಲಯಗಳಲ್ಲಿ ಬಟ್ಟೆ ತೊಳೆಯಲು ವಾಶಿಂಗ ಮಶಿನ್ ಸೌಲಭ್ಯ ಒದಗಿಸಲಾಗುವುದು. ಎಲ್ಲರೂ ಒಂದು ಕುಟುಂಬದಂತೆ ನಡೆದುಕೊಳ್ಳಿ, ಯಾರು ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಬೇಡಿ, ನೀತಿ ನಿಯಮಿ ಪಾಲಿಸಿ. ಒಂದುವೇಳೆ ತಾವು ವಿಶ್ವವಿದ್ಯಾಲಯಕ್ಕೆ ದಕ್ಕೆ ತರುವ ರೀತಿಯಲ್ಲಿ ನಡೆದುಕೊಂಡರೆ ತಕ್ಕ ಶಿಕ್ಷೆ ನೀಡಲಾಗುವುದು ಎಂದರು.
ಕ್ಯಾಂಪಸ್ ಡೆವಲಪ್‍ಮೆಂಟ್ ಡೀನ್ ಪೆÇ್ರ. ಚನ್ನವೀರ್ ಆರ್.ಎಂ ಅವರು ಮಾತನಾಡಿ, ವಿಶ್ವವಿದ್ಯಾಲಯದ ಕಾಂಪಸ್ ಬಹಳ ವಿಶಾಲ ಮತ್ತು ಸುಂದರವಾಗಿದೆ. ನಿಮ್ಮ ಅಧ್ಯನಕ್ಕೆ ಹೇಳಿಮಾಡಿಸಿದಂತ ಕ್ಯಾಂಪಸ್ ಇದಾಗಿದೆ. ನಮ್ಮಲ್ಲಿ ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಖ್ಯಾತಿಯ ಶಿಕ್ಷಕರಿದ್ದಾರೆ ಅವರ ಜ್ಞಾನ ಮತ್ತು ಅನುಭವದ ಸದುಪಯೋಗ ಪಡಿಸಿಕೊಳ್ಳಿ. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಜಿವನ ರೂಪಿಸುವ ಕೇಂದ್ರಗಳು. ತಾವು ತಮ್ಮ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ ಎಂದರು. ಡಾ. ಎನ್. ಬಾಬು ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಂಥಪಾಲಕ ಡಾ. ಪಿ.ಎಸ್. ಕಟ್ಟಿಮನಿ, ಮುಖ್ಯ ವಾರ್ಡನ್ ಡಾ. ಬಸವರಾಜ್ ಎಂ.ಎಸ್., ಎನ್‍ಎಸ್‍ಎಸ್ ಅಧಿಕಾರಿ ಡಾ. ಶಿವಮ ಮಿಶ್ರಾ ಮತ್ತಿತರ ಅಧಿಕಾರಿಗಳು ತಮ್ಮ ವಿಭಾಗಗಳ ಕುರಿತು ಮಾಹಿತಿ ನೀಡಿದರು. ಡಾ. ನಿತಿನ್ ಅವರು ವಂದಿಸಿದರು. ಎಲ್ಲ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.