ಬ್ರೈಟ್ ಕಿಡ್ಸ್ ಅಬಾಕಸ್ ಕೇಂದ್ರಕ್ಕೆ ರಾಜ್ಯಮಟ್ಟದ ಬಹುಮಾನ
ಕಲಬುರಗಿ,ಅ.5: ನಗರದ ಉಚ್ಚ ನ್ಯಾಯಾಲಯದ ಬಳಿ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ಬ್ರೈಟ್ ಕಿಡ್ಸ್ ಅಬಾಕಸ್ ಕೇಂದ್ರದ ವಿದ್ಯಾರ್ಥಿಗಳು ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಬಹುಮಾನ ಪಡೆದಿದ್ದಾರೆ.
ಮೈಸೂರು ಮತ್ತು ಹೊಸಪೇಟೆಯಲ್ಲಿ ಜರುಗಿದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಬ್ರೈಟ್ ಕಿಡ್ಸ್ ಅಬಾಕಸ್ ಕೇಂದ್ರದ 58 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 28 ವಿದ್ಯಾರ್ಥಿಗಳು ಮೊದಲನೆಯ, 14 ವಿದ್ಯಾರ್ಥಿಗಳು ಎರಡನೆಯ,6 ವಿದ್ಯಾರ್ಥಿಗಳು ಮೂರನೆಯ ಮತ್ತು 5 ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಪಡೆದಿದ್ದಾರೆ ಎಂದು ಕೇಂದ್ರದ ಪ್ರಿಯಾಂಕಾ.ಬಿ ಮತ್ತು ಫರ್ಹೀನ್.ಟಿ ಅವರು ತಿಳಿಸಿದ್ದಾರೆ.