ಡಾ.ಭದ್ರಶೆಟ್ಟಿಗೆ ನ್ಯಾಷನಲ್ ಎಕ್ಸೆಲೆನ್ಸ್ ಅವಾರ್ಡ್
ಕಲಬುರಗಿ,ಅ.4: ಉತ್ತರ ಪ್ರದೇಶ ರಾಜ್ಯದ ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಏರ್ಪಡಿಸಿದ್ದ ಅಂತರ್ ರಾಷ್ಟ್ರೀಯ ರಾಮಾಯಣ ಪ್ರತಿಷ್ಠಾನ ಮಹೋತ್ಸವ ಸಮಾರಂಭದಲ್ಲಿ ನ್ಯಾಷನಲ್ ಆಂಟಿ ಕರಪ್ಶನ್ ಆಂಡ್ ಆಪರೇಷನ್ ಕಮೀಟಿ ಆಫ್ ಇಂಡಿಯಾದ ದಕ್ಷಿಣ ಭಾರತದ ಅಧ್ಯಕ್ಷ ಡಾ.ಎ ಎಸ್ ಭದ್ರಶೆಟ್ಟಿ ಅವರಿಗೆ ಅವರ ರಾಷ್ಟ್ರ ಮಟ್ಟದ ಸೇವೆ ಮತ್ತು ಸಾಧನೆಯನ್ನು ಗುರುತಿಸಿ, ನ್ಯಾಷನಲ್ ಎಕ್ಸೆಲೆನ್ಸ್ ಅವಾರ್ಡ್-2024 ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ವ್ಹಿ ಪಿ ಸಿಂಗ್ ಮತ್ತು ಸಚಿವರು ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಟೀಮ್ ಸದಸ್ಯರುಗಳಾದ ಶಾಮರಾವ್ ಪ್ಯಾಟಿ, ಪ್ರಶಾಂತ್ ತಡಕಲೆ , ಜಿ ಆರ್ ಚಿಕ್ಕಮಠ , ಶಾಮರಾವ್ ಪಾಟೀಲ್, ಡಾ. ನಾಗಮ್ಮ ಭದ್ರಶೆಟ್ಟಿ ಮತ್ತು ಶಶಿಕಲಾ ಚಿಕ್ಕಮಠ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.