ಮುಡಾ ಮಾದರಿಯಲ್ಲಿ ಬಿ.ಎಸ್.ಎಸ್.ಕೆ ಹಗರಣದ ತನಿಖೆ ನಡೆಯಲಿ: ಜೈರಾಜ ಬುಕ್ಕಾ
ಬೀದರ್:ಅ.5: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆದ ಹಗರಣದ ತನಿಖೆ ಮಾದರಿ ಬಿ.ಎಸ್.ಎಸ್.ಕೆ ಯಲ್ಲಿ ನಡೆದಿದೆ ಎನ್ನಲಾದ 135 ಕೋಟಿ ಹಗರಣದ ತನಿಖೆ ನಡೆಸಬೇಕೆಂದು ಸಿ.ಬಿ.ಐಗೆ ದೂರು ಸಲ್ಲಿಸಲಾಗುವುದೆಂದು ಸಮಿತಿಯ ಕಾನೂನು ಸಲಹೆಗಾರರು ಹಾಗೂ ಹಿರಿಯ ವಕೀಲರಾದ ಜೈರಾಜ ಬುಕ್ಕಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಅಧಿಕಾರ ದುರುಪಯೋಗ ಹಾಗೂ ಅಭಿವೃದ್ಧಿ ಮಾಡದೇ ಹಣ ಲಪಟಾಯಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕಿದೆ. ಈ ಕುರಿತಾಗಿ ನಿವೃತ್ತ ನ್ಯಾಯಾಧೀಶರ ತಂಡ ರಚಿಸಿ ನಿಸ್ಪಕ್ಷಪಾತ ತನಿಖೆಯಾಗಬೇಕು, ಈ ಮೊದಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೇವಲ ಬೆಂಗಳೂರು ಉಚ್ಛ ನ್ಯಾಯಾಲಯದಲ್ಲಿ ಹಾಕಬಹುದಿತ್ತು. ಆದರೆ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆಚಿಜನೆಯ ಹಾಗೂ ನ್ಯಾಯಮೂರ್ತಿಗಳಾದ ಅಶೋಕ ಕಿಣಗಿ ಅವರ ಆದೇಶದ ಮೆರೆಗೆ ಕಲಬುರಗಿ ಉಚ್ಛ ನ್ಯಾಯಾಲಯದಲ್ಲಿಯೇ ಸಾರ್ವಜನಿಕ ಹಿತಾದಸಕ್ತಿ ಅರ್ಜಿ ಸಲ್ಲಿಸಬಹುದಾಗಿದ್ದು, ಬಿ.ಎಸ್.ಎಸ್.ಕೆ ಕಾರ್ಖಾನೆಯಲ್ಲಿ ನಡೆದ 135 ಕೋಟಿ ಹಗರಣದ ತನಿಖೆಯನ್ನು ಸಿ.ಬಿ.ಐಗೆ ವಹಿಸಲು ಅಪಿಲು ಸಲ್ಲಿಸಲಾಗುವುದೆಂದು ಬುಕ್ಕಾ ಹೇಳಿದರು.