ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಹರ್ಬಲ್ ಹಾರ್ಮನಿ ಮತ್ತು ಜೆ.ಸಿ. ಭೋಸ್ ಸಸ್ಯಶಾಸ್ತ್ರ ಕ್ಲಬ್ ಉದ್ಘಾಟನೆ
ಬೀದರ :ಅ.5: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಹರ್ಬಲ್ ಹಾರ್ಮನಿ ಮತ್ತು ಜೆ.ಸಿ. ಭೋಸ್ ಸಸ್ಯಶಾಸ್ತ್ರ ಕ್ಲಬ್‍ನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಸಸಿಗೆ ನೀರೆರೆಯುವುದರ ಮುಖಾಂತರ ಹಾಗೂ ಜಗದೀಶಚಂದ್ರ ಭೋಸ್‍ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮುಖಾಂತರ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡುತ್ತಾ ಸಸ್ಯಂ, ರಮ್ಯಂ, ಸುಂದರಂ ಎಂಬಂತೆ ಪ್ರಕೃತ ಮಾತೆ ನಮ್ಮನ್ನು ರಕ್ಷಿಸುತ್ತಾ ಬಂದಂತೆ ನಾವು ಸಹ ಮಾನವರು ಸ್ವಾರ್ಥಕ್ಕಾಗಿ ಬದುಕದೆ ನಾವು ಪ್ರಕೃತಿಯ ಬೆಳಕು, ನೀರು, ಅಗ್ನಿ, ಗಾಳಿ ಹಾಗೂ ಮಣ್ಣು ಇವುಗಳನ್ನು ದೇವರೆಂದು ಪೂಜಿಸುತ್ತಾ ವೇದಗಳ ಕಾಲದಿಂದ ನಾವು ನಂಬುತ್ತೇವೆ ಈಗಲು ಆಧುನಿಕ ಪ್ರಪಂಚದಲ್ಲೂ ಸಹ ನಮ್ಮ ರಾಜ್ಯದಲ್ಲಿರುವ ಪಶ್ಚಿಮ ಘಟ್ಟಗಳು ಹಾಗೂ ಕರಾವಳಿ ಪ್ರದೇಶ ಹಾಗೂ ಮಲೆನಾಡು ಪ್ರದೇಶದ ಅರಣ್ಯ ಸಂಪತ್ತನ್ನು ರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಇಲ್ಲಿ ನೆರದ ವಿದ್ಯಾರ್ಥಿಗಳು ಪ್ರಕೃತಿ ಕೊಟ್ಟದಂತಹ ಕೊಡುಗೆ ನಮ್ಮ ಮುಂದಿನ ಪೀಳಿಗೆಗೆ ಇರುವಂತೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ತೋಟಗಾರಿಕಾ ಮಹಾವಿದ್ಯಾಲಯ ಔಷಧಿಯ ಸಸ್ಯ ಮತ್ತು ಸುಗಂಧಿ ಸಸ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ವಿ.ಪಿ. ಸಿಂಗ್‍ಯವರು ಮಾತನಾಡುತ್ತಾ ಇಂದು ಭಾರತದಲ್ಲಿ ಔಷಧಿಯ ಸಸ್ಯಗಳು ಉಪನಿಷತ್ತು, ಪುರಾಣಗಳು ಹಾಗೂ ವೇದಗಳು ಮತ್ತು ವೇದಾಂತಗಳಲ್ಲಿ ನಮ್ಮ ಭವ್ಯ ಭಾರತ ಆಯುರ್ವೇದ ಸಸ್ಯಗಳಿಗೆ ಹೆಸರಾಂತ ರಾಷ್ಟ್ರವಾಗಿದೆ ಈಗೀನ ಜ್ವಲಂತ ಕಾಯಿಲೆಗಳಿಗೆ ನಮ್ಮ ಪುರಾಣಗಳಲ್ಲಿ ವೇದಗಳಲ್ಲಿ ಔಷಧಿಯ ಸಸ್ಯಗಳ ಬಗ್ಗೆ ಕ್ರಿ.ಪೂ.ದಲ್ಲಿಯೇ ಪ್ರಪ್ರಥಮವಾಗಿ ಭಾರತ ರಾಷ್ಟ್ರದಿಂದ ಮಾರಕ ಕಾಯಿಲೆಗಳಿಗೆ ಔಷಧಿ ಸಿಗುತ್ತಿತು. ಆದರೆ ಮಾನವನ ದುರುಳ ಭಾವನೆಯಿಂದ ಅರಣ್ಯ ಸಂಪತ್ತು ನಾಶವಾಗಿ ಅದರಲ್ಲಿರುವ ಹಲವಾರು ಔಷಧಿ ಸಸ್ಯಗಳು ನಾಶವಾಗಿ ಈಗ ಕೇವಲ 2500 ಔಷಧಿ ಸಸ್ಯಗಳು ಮಾತ್ರ ಇವೆ. ಇವೆಲ್ಲ ಸಸ್ಯಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ವಿದ್ಯಾರ್ಥಿಗಳಿಗೆ ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ಪ್ರಾಚೀನ ಕಾಲದ ಋಷಿ-ಮುನಿಗಳು ವೇದಗಳ ಅಧ್ಯಯನ ಮಾಡಿ ನಾಲಂದ, ಕಂಚಿ, ತಕ್ಷಶಿಲಾ, ಬೀದರ ಮದರಸಾ ವಿಶ್ವವಿದ್ಯಾಲಯಗಳಲ್ಲಿ ತತ್ವಜ್ಞಾನಿಗಳು ಬುದ್ಧಿಜೀವಿಗಳು ಅಯುರ್ವೇದ ತಜ್ಞರು ಹಲವಾರು ರೋಗಗಳಿಗೆ ಔಷಧಿಯ ನೀಡುತ್ತಿದ್ದರು ಇವರೆಲ್ಲ ಇತಿಹಾಸ ತಿಳಿಯುವುದು ಆಧುನಿಕ ವಿದ್ಯಾರ್ಥಿಗಳ ಪ್ರಥಮ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಗೀತೆ ಕು. ಶೃದ್ಧಾ ಕೋಟೆ ಬಿ.ಎಸ್ಸಿ.3ನೇ ಸೆಮಿಸ್ಟರ್ ಹಾಡಿದರೆ, ಸ್ವಾಗತವನ್ನು ಶ್ರೀಮತಿ ನಾಗೇಶ್ವರಿ ಸ್ವಾಮಿ ನಡೆಸಿಕೊಟ್ಟರೆ, ಡಾ. ಸೂರ್ಯವಂಶಿ ಪೂಜಾ ಪ್ರಾಸ್ತಾವಿಕ ನುಡಿ ಹೇಳಿದರೆ, ಶ್ರೀ ಅನೀಲಕುಮಾರ ಜಾಧವ ನಿರೂಪಿಸಿದರೆ, ಶ್ರೀಮತಿ ಪೃಥ್ವಿ ಸಾಲಿಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು.