ಅರ್ಧತಲೆನೋವಿಗೆ ಮನೆಮದ್ದು
೧. ಒಂದೇ ಭಾಗದಲ್ಲಿ ತಲೆ ನೋಯುತ್ತಿದ್ದರೆ ನುಗ್ಗೆಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಹಾಕದೆ ಕೇವಲ ಸೊಪ್ಪಿನ ರಸವನ್ನು ೨ ಬಾರಿ ಶೋಧಿಸಿ ಬಲಭಾಗದಲ್ಲಿ ನೋವಿದ್ದರೆ ಎಡ ಕಿವಿಗೂ, ಎಡಭಾಗದಲ್ಲಿ ನೋವಿದ್ದರೆ ಬಲ ಕಿವಿಗೂ ೨-೨ ಹನಿ ಹಾಕಿದರೆ ೩ ದಿನಗಳಲ್ಲಿ ನೋವು ಕಡಿಮೆ ಆಗುತ್ತದೆ.
೨. ಕೆಂಪು ಮೂಲಂಗಿ ಗಿಡದ ಎಲೆಗೆ ಶುದ್ಧ ತುಪ್ಪ ಸವರಿ ಬಿಸಿಗೆ ಹಿಡಿಯಿರಿ ಅದನ್ನು ಹಿಂಡಿದರೆ ರಸ ಬರುತ್ತದೆ. ಆ ರಸವನ್ನು ಮೂಗಿಗೆ ಅಥವಾ ಕಿವಿಗೆ ಹಿಂಡಿದರೆ ಅರ್ಧತಲೆನೋವು ನಿವಾರಣೆಯಾಗುತ್ತದೆ.
೩. ಬಿಳಿ ಶಂಖಪುಷ್ಪದ ಹೂವಿನ ಗಿಡದ ಬೇರನ್ನು ನೀರಲ್ಲಿ ತೇಯ್ದು ಕಣ್ಣಿಗೆ ಕಾಡಿಗೆ ರೀತಿ ಹಚ್ಚಿಕೊಂಡರೆ ಅರೆತಲೆನೋವು ಕಡಿಮೆ ಆಗುತ್ತದೆ.
೪. ಬಿಳಿ ಈರುಳ್ಳಿಯನ್ನು ೨ ಕರಿಮೆಣಸಿನ ಜೊತೆ ಅರೆದು ರಸ ತೆಗೆಯಿರಿ. ಆ ರಸವನ್ನು ೨ ಬಾರಿ ಶೋಧಿಸಿಟ್ಟುಕೊಳ್ಳಿ. ತಲೆನೋವು ಯಾವ ಭಾಗದಲ್ಲಿ ಬರುತ್ತದೆಯೋ ಅದರ ವಿರುದ್ಧ ದಿಕ್ಕಿನ ಮೂಗಿನ ಹೊಳ್ಳೆಗೆ ೪ ಹನಿ ಹಾಕಿದರೆ ಅರೆತಲೆನೋವು ನಿವಾರಣೆಯಾಗುತ್ತದೆ.
೫. ನುಗ್ಗೆಸೊಪ್ಪಿನ ರಸವನ್ನು ಎಡಭಾಗದಲ್ಲಿ ತಲೆ ನೋವಿದ್ದರೆ ಬಲಭಾಗದ ಕಿವಿಗೆ, ಬಲಭಾಗದಲ್ಲಿ ತಲೆನೋವು ಇದ್ದರೆ ಎಡಕಿವಿಗೆ ೨ ಹನಿ ಹಾಕಬೇಕು. ಅರೆತಲೆನೋವು ಕಡಿಮೆ ಆಗುತ್ತದೆ.
೬. ಒಣಗಿದ ಎಕ್ಕದ ಬೇರಿನ ಚೂರ್ಣವನ್ನು ಕೆಂಡದ ಮೇಲೆ ಉದುರಿಸಿ ಹೊಗೆಯನ್ನು ತೆಗೆದುಕೊಳ್ಳುವುದರಿಂದ ತಲೆನೋವು ಕಡಿಮೆ ಆಗುತ್ತದೆ.
೭. ಮಲಬದ್ಧತೆ ನಿವಾರಣೆ ಮಾಡಿದರೆ ಅನುಕೂಲವಾಗುತ್ತದೆ.
೮. ಶುದ್ಧ ತುಪ್ಪವನ್ನು ಬಿಸಿಮಾಡಿ ನೆತ್ತಿಗೆ ಹಾಕಿ ಚೆನ್ನಾಗಿ ತಿಕ್ಕಬೇಕು. ೨ ಗಂಟೆಯ ನಂತರ ತಲೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು. ಅರೆ ತಲೆನೋವು ಉಪಶಮನವಾಗುತ್ತದೆ.
೯. ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ ಹೆಚ್ಚಾಗಿ ಇರುವ ಆಹಾರವನ್ನು ಸೇವಿಸಬೇಕು.
೧೦. ತುಂಬೆಸೊಪ್ಪಿನ ರಸವನ್ನು ಎರಡೂ ಮೂಗಿನ ಹೊಳ್ಳೆಗಳಿಗೆ ೨-೨ ಹನಿಗಳನ್ನು ಹಾಕಿಕೊಳ್ಳುವುದರಿಂದ ಅರೆತಲೆನೋವು ಹತೋಟಿಗೆ ಬರುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.