ಹೆಂಗಸರ ಮುಟ್ಟಿನ ಸಮಸ್ಯೆಗಳು
೧. ಅತಿಯಾದ ಋತುಸ್ರಾವವಾಗುತ್ತಿದ್ದರೆ ದಿನಕ್ಕೆ ೩ – ೪ ಬಾರಿ ಸ್ವಲ್ಪಸ್ವಲ್ಪ ನಿಂಬೆರಸವನ್ನು ಸೇವನೆ ಮಾಡುತ್ತಿದ್ದರೆ ಕಡಿಮೆ ಆಗುತ್ತದೆ.
೨. ಮಾಸಿಕಸ್ರಾವ ಸರಿಯಾಗಿ ಆಗದ ಮಹಿಳೆಯರಿಗೆ ಅನಾನಸ್ ಕಾಯಿಯ ರಸವನ್ನು ಸೇವಿಸುವುದರಿಂದ ಮಾಸಿಕಧರ್ಮ ಸರಿಯಾಗಲು ಸಹಕಾರಿಯಾಗುತ್ತದೆ.
೩. ಗರ್ಭಾಶಯದ ಸೋಂಕು: ನಂದಿಬಟ್ಟಲು ಹೂವಿನ ಎಲೆಗಳನ್ನು ಚೆನ್ನಾಗಿ ತೊಳೆಯಿರಿ. ಹಿಂದಿನ ದಿನ ರಾತ್ರಿ ಕೆಂಪುಅಕ್ಕಿ ೨ ಚಮಚ ನೆನೆಹಾಕಿ ಬೆಳಿಗ್ಗೆ ನೆಂದ ಅಕ್ಕಿ ಜೊತೆ ಎಲೆಯನ್ನು ಹಾಕಿ ರುಬ್ಬಿರಿ. ಅದನ್ನು ಚೆನ್ನಾಗಿ ಶೋಧಿಸಿ ಅದಕ್ಕೆ ಹಸಿಹಾಲಿನ ಮಿಶ್ರಣ ಮಾಡಿ ಬೆಳಿಗ್ಗೆ ಬರೀಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ಗರ್ಭಾಶಯದ ಸೋಂಕಿನಿಂದ ಸಂತಾನಕ್ಕೆ ತೊಂದರೆಯಾಗಿದ್ದರೂ ಅನುಕೂಲವಾಗುತ್ತದೆ.
೪. ಋತುಸ್ರಾವದ ತೊಂದರೆಗೆ: ಹುರುಳಿ ಕಟ್ಟಿನ ಸಾರನ್ನು ಬಳಸುವುದರಿಂದ ಪರಿಹಾರ ದೊರೆಯುತ್ತದೆ.
೫. ಮಾಸಿಕಧರ್ಮ ಸರಿಯಾಗಿ ಆಗದಿದ್ದಾಗ: ಹುರುಳಿ, ಪರಂಗಿ ಚಕ್ಕೆ ಜಡೆಹತ್ತಿಎಲೆ ಇವನ್ನು ಕುಟ್ಟಿ ನೀರಿನಲ್ಲಿ ಹಾಕಿ ಕಷಾಯ ಮಾಡಿ ಬೆಲ್ಲ ಸೇರಿಸಿ ಕುಡಿಯಬೇಕು. ಸ್ತ್ರೀಯರ ರಜೋಧರ್ಮ ನಿಂತುಹೋಗಿದ್ದರೆ ಕಾಲಕ್ಕೆ ಸರಿಯಾಗಿ ಆಗದಿದ್ದರೆ ತಕ್ಷಣ ಪ್ರಾರಂಭವಾಗುತ್ತದೆ.
೬. ಮೂಲಂಗಿ ಬೀಜವನ್ನು ನುಣ್ಣಗೆ ಅರೆದು ಅದನ್ನು ಮಜ್ಜಿಗೆಯಲ್ಲಿ ಹಾಕಿ ಬೆರೆಸಿ ಬೆಳಿಗ್ಗೆ ಬರೀಹೊಟ್ಟೆಯಲ್ಲಿ ಕುಡಿದರೆ ನಿಂತುಹೋಗಿರುವ ಮಾಸಿಕಧರ್ಮ (ಮುಟ್ಟು) ಸರಿಯಾಗಿ ಆಗುವುದು.
೭. ಪ್ರದರ ರೋಗಗಳು: ಕಿರುಕಸಾಲೆ ಸೊಪ್ಪಿನ ರಸವನ್ನು ಮರದರಿಶಿನದ ಚೂರ್ಣವನ್ನು ಬೆರೆಸಿ ೭ ದಿನಗಳ ಕಾಲ ತೆಗೆದುಕೊಳ್ಳುವುದರಿಂದ ಎಂತಹ ಪ್ರದರ ರೋಗವಾದರೂ ಕಡಿಮೆ ಆಗುತ್ತದೆ (ಶ್ವೇತ ಅಥವಾ ರಕ್ತ ಪ್ರದರ).
೮. ಪ್ರದರ ರೋಗಗಳು: ಖರ್ಜೂರದ ಬೀಜಗಳನ್ನು ಪುಡಿ ಮಾಡಿಟ್ಟುಕೊಂಡು ಅದನ್ನು ತುಪ್ಪದಲ್ಲಿ ಹುರಿದು ಅಕ್ಕಿ ತೊಳೆದ ನೀರಿನಲ್ಲಿ ಹಾಕಿ ಕುಡಿಯುತ್ತಾ ಬಂದರೆ ರಕ್ತ ಪ್ರದರ ಹಾಗೂ ಶ್ವೇತ ಪ್ರದರದ ಸಮಸ್ಯೆಗೆ ಒಳ್ಳೆಯ ಉಪಚಾರ.
೯. ಶ್ವೇತ ಪ್ರದರ: ಬೆಟ್ಟದ ನೆಲ್ಲಿಕಾಯಿ ಚೂರ್ಣವನ್ನು ಕಲ್ಲುಸಕ್ಕರೆಯ ಪುಡಿಯ ಜೊತೆ ೮ ದಿನಗಳ ಕಾಲ ಪ್ರತಿದಿನ ಸೇವಿಸಿದರೆ ಹತೋಟಿಗೆ ಬರುತ್ತದೆ (ಪ್ರತಿದಿನ ೨ ಬಾರಿ)
೧೦. ಶ್ವೇತ ಪ್ರದರ: ಬೂದುಗುಂಬಳದ ರಸಕ್ಕೆ ಕಲ್ಲುಸಕ್ಕರೆ ಪುಡಿಮಾಡಿ ಸೇರಿಸಿ ೩ ದಿನ ಸೇವಿಸಿ.
೧೧. ಅಮೃತಬಳ್ಳಿಯನ್ನು ಜಜ್ಜಿ ೧ ಲೋಟ ನೀರಿನಲ್ಲಿ ರಾತ್ರಿ ಮುಳುಗಿಸಿಡಿ. ಬೆಳಿಗ್ಗೆ ಚೆನ್ನಾಗಿ ಕಿವುಚಿಕೊಂಡು ಬರೀ ನೀರು ಮಾತ್ರ ಸೇವಿಸಿ (೧೫ ದಿನ)
೧೨. ಅತಿಮಧುರ ಹಾಗೂ ಶತಾವರಿ ಬೇರನ್ನು ಪುಡಿಮಾಡಿ ಮಿಶ್ರ ಮಾಡಿಟ್ಟುಕೊಂಡು ಇದನ್ನು ಅಕ್ಕಿ ತೊಳೆದ ನೀರಿನಲ್ಲಿ ಕಲಸಿ ಸೇವಿಸಿ (೧೫ ದಿನ).
೧೩.ಹೊಟ್ಟೆನೋವು: ಮುಟ್ಟಿನ ಸಮಯದ ನೋವಿಗೆ ೧ ಚಮಚ ಸೋಂಪು ಕಾಳನ್ನು ನೀರಿನಲ್ಲಿ ಹಾಕಿ ಕಷಾಯ ಮಾಡಿ ಹಾಲು, ಸಕ್ಕರೆ ಹಾಕಿ ಕುಡಿಯಿರಿ.
೧೪. ಕಡಲೆಕಾಳು ಗಾತ್ರದ ಇಂಗನ್ನು ತುಪ್ಪದಲ್ಲಿ ಹುರಿದು ದಿನಕ್ಕೆ ೨ ಬಾರಿ ಸೇವಿಸಿ (೩ ದಿನ).
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧