ಮಲಬದ್ಧತೆಗೆ ಮನೆಮದ್ದು
೧. ರಾತ್ರಿ ಮಲಗುವಾಗ ೧ ಲೋಟ ಕ್ಯಾರೆಟ್ ರಸ ಕುಡಿಯುತ್ತಾ ಬಂದರೆ ಮಲಬದ್ದತೆ ನಿವಾರಣೆಯಾಗುತ್ತದೆ.
೨. ಸಿಹಿಮೂಲಂಗಿಯನ್ನು ತುರಿದು ಮೊಸರಿನಲ್ಲಿ ಹಾಕಿ ತಿಂದರೆ ಅಥವಾ ಮೂಲಂಗಿಯನ್ನು ಯಾವ ರೂಪದಲ್ಲಾದರೂ ಹಸಿಯಾಗಿ ಬಳಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
೩. ಕಳಿತ ಬಾಳೆಹಣ್ಣನ್ನು ಸಿಪ್ಪೆ ಸಹಿತವಾಗಿ ಏಲಕ್ಕಿಪುಡಿಯ ಜೊತೆ ಸೇರಿಸಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
೪. ಬಾಳೆದಿಂಡನ್ನು ಸಣ್ಣಗೆ ಕತ್ತರಿಸಿ ಹಸಿಯಾಗಿ ಕೋಸಂಬರಿ ರೂಪದಲ್ಲಿ ಸೇವಿಸಿದರೆ ಮಲಬದ್ಧತೆ ನಿವಾರಣೆ.
೫. ೩ – ೪ ದಿನ ಮಲವಿಸರ್ಜನೆ ಆಗದಿದ್ದಾಗ ೧ ನಿಂಬೆ ಗಾತ್ರದ ಹುಣಸೇಹಣ್ಣನ್ನು ನೆನೆಸಿ ಕಿವುಚಿ ರಸ ತೆಗೆದುಕೊಳ್ಳಿ. ಅದಕ್ಕೆ ೧ ಬಾಳೆಹಣ್ಣನ್ನು ಚಿನ್ನಾಗಿ ಕಿವುಚಿ ಹುಣಸೆ ರಸಕ್ಕೆ ಸೇರಿಸಿ ಸೇವಿಸಿದರೆ ೧೦ -೧೫ ನಿಮಿಷದಲ್ಲಿ ಸಂಪೂರ್ಣವಾಗಿ ಮಲವಿಸರ್ಜನೆಯಾಗುತ್ತದೆ.
೬. ಸೊಪ್ಪುಗಳನ್ನು ಆಹಾರದಲ್ಲಿ ಜಾಸ್ತಿ ಬಳಸುವುದರಿಂದ ಹಾಗೂ ಕಾಳುಗಳನ್ನು ಮೊಳಕೆ ಕಟ್ಟಿ ಹಸಿಯಾಗಿಯೇ ಉಪಯೋಗಿಸುವುದರಿಂದ ಮಲಬದ್ದತೆ ನಿವಾರಣೆಯಾಗುತ್ತದೆ.
೭. ರಾತ್ರಿವೇಳೆ ೫ – ೬ ಪಪ್ಪಾಯಿ (ಪರಂಗಿ) ಹಣ್ಣಿನ ಹೋಳುಗಳನ್ನು ತಿಂದರೆ ಬೆಳಿಗ್ಗೆ ಸುಲಭ ಮಲವಿಸರ್ಜನೆಯಾಗುತ್ತದೆ.
೮. ಬೆಳಿಗ್ಗೆ ಉಪಹಾರಕ್ಕೆ ಮುಂಚೆ ಹಾಗೂ ರಾತ್ರಿ ಮಲಗುವ ಮುಂಚೆ ೧ ಲೋಟ ಬಿಸಿನೀರನ್ನು ಕುಡಿಯುವುದರಿಂದ ಮಲಬದ್ಧತೆ ಸುಲಭ ಆಗುತ್ತದೆ.
೯. ಹುರುಳಿಕಾಳನ್ನು ಬೇಯಿಸಿದ ಕಟ್ಟಿಗೆ (ಬೆಂದ ನೀರು) ಸ್ವಲ್ಪ ನಿಂಬೆರಸ ಹಿಂಡಿಕೊಂಡು ಕುಡಿದರೆ ಮಲವಿಸರ್ಜನೆ ಸುಲಭವಾಗಿ ಆಗುತ್ತದೆ.
೧೦. ಊಟದ ನಂತರ ೧ ಮಾವಿನಹಣ್ಣನ್ನು ತಿಂದರೆ ಮಲಬದ್ದತೆ ನಿವಾರಣೆಯಾಗುತ್ತದೆ.
೧೧. ಸೋರೆಕಾಯಿ ಅಥವಾ ಬೂದುಗುಂಬಳಕಾಯಿ ರಸ ಸೇವನೆಯಿಂದ ಮಲಬದ್ದತೆ ಸುಲಭವಾಗಿ ನಿವಾರಣೆಯಾಗುತ್ತದೆ.
೧೨. ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಮಲವು ಸುಲಭವಾಗಿ ವಿಸರ್ಜನೆಯಾಗುವುದು.
೧೩. ಪಾಲಿಷ್ ಮಾಡದ ಅಕ್ಕಿ ಅಂದರೆ ಕೆಂಪುಅಕ್ಕಿ ಸೇವನೆಯಿಂದ ಮಲಬದ್ದತೆ ನಿವಾರಣೆಯಾಗುವುದು.
೧೪. ರಾತ್ರಿ ನಿದ್ರೆ ಮಾಡಿದಾಗ ಬೆಳಗಿನ ಜಾವದಲ್ಲಿ ಅಥವಾ ಮೊದಲ ಬಾರಿ ಎಚ್ಚರವಾದಾಗ ೧ ಲೋಟ ನೀರು ಕುಡಿದು ಮತ್ತೆ ಮಲಗಿದರೆ ನಂತರ ಎಚ್ಚರವಾದಾಗ ಸುಲಭವಾಗಿ ಮಲ ವಿಸರ್ಜನೆ ಆಗುವುದು.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧