ತಲೆ ಸುತ್ತುವಿಕೆ ಮನೆಮದ್ದು
೧. ನುಗ್ಗೆಸೊಪ್ಪನ್ನು ಬೇಯಿಸಿ ಚೆನ್ನಾಗಿ ಬಸಿದು ನೀರನ್ನು ಬೇರ್ಪಡಿಸಿ ಅದಕ್ಕೆ ನಿಂಬೆರಸ ಸೇರಿಸಿ ೧ ವಾರಗಳ ಕಾಲ ಕುಡಿಯುತ್ತಾ ಬಂದರೆ ತಲೆ ಸುತ್ತುವಿಕೆ ನಿಲ್ಲುತ್ತದೆ.
೨. ನಿಂಬೆಹಣ್ಣಿನ ರಸವನ್ನು ಬರೀ ಜೇನುತುಪ್ಪದೊಂದಿಗೆ ಸೇವಿಸಿ, ತಲೆಸುತ್ತುವಿಕೆ ಕಡಿಮೆ ಆಗುತ್ತದೆ.
೩. ಮಾದವಾಳದ ಹಣ್ಣಿನ ರಸವನ್ನು ಷರಬತ್ತು ಮಾಡಿ ಕುಡಿದರೆ ಅನುಕೂಲವಾಗುತ್ತದೆ.
೪. ದಾಳಿಂಬೆ ರಸಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಸೇವಿಸಿ, ತಲೆ ಸುತ್ತುವಿಕೆ ನಿವಾರಣೆಯಾಗುತ್ತದೆ.
೫. ಜೀರಿಗೆ ಹಾಗೂ ಕೊತ್ತಂಬರಿ ಬೀಜದ ಕಷಾಯವನ್ನು ಕುಡಿಯುತ್ತಾ ಬಂದರೆ ತಲೆ ಸುತ್ತುವಿಕೆ ಕಡಿಮೆಯಾಗುತ್ತದೆ.
೬. ಕಪ್ಪುಜೀರಿಗೆಯನ್ನು ಪುಡಿಮಾಡಿಟ್ಟುಕೊಂಡು ಜೇನುತುಪ್ಪದ ಜೊತೆ ಸೇವಿಸಿ.
೭. ಬೆಟ್ಟದ ನೆಲ್ಲಿಕಾಯಿ ರಸವನ್ನು ಜೇನುತುಪ್ಪದ ಜೊತೆ ಸೇರಿಸಿ ತಲೆ ಸುತ್ತುವಿಕೆ ಕಡಿಮೆಯಾಗುತ್ತದೆ.
೮. ಹುಣಸೆಹಣ್ಣಿನ ರಸಕ್ಕೆ ಬೆಲ್ಲ ಸೇರಿಸಿ ಸೇವಿಸುವುದರಿಂದ ತಲೆ ಸುತ್ತುವಿಕೆ ಹತೋಟಿಗೆ ಬರುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧