ಸೋಲಿನ ಸರಪಳಿ ಕಳಚಿಕೊಂಡ ಬೆಂಗಳೂರು ಟ್ರೋಫಿಡೋಸ್
ಚೆನ್ನೈ, ಮಾ. ೧೩ – ಚೆನ್ನೈನ ಜವಾಹರ್‌ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರುಪೆ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರು ಟ್ರೋಫಿಡೋಸ್ ತಂಡ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ.ಅಹಮದಾಬಾದ್ ಡಿಫೆಂಡರ್ಸ್ ತಂಡದ ವಿರುದ್ಧ ಬೆಂಗಳೂರು ಟ್ರೋಫಿಡೋಸ್ ಅದ್ಭುತ ಗೆಲುವು ಸಾಧಿಸಿತು. ಈ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಲಗ್ಗೆ ಇಟ್ಟಿತು.ಟಿ.ಆರ್ ಸೇತು ಅವರ ಸರ್ವ್ ಮತ್ತು ಸ್ಮಾಷ್ ಗಳು, ಥಾಮಸ್ ಹೆಪ್ಟಿನ್ಸ್ಟಾಲ್ ಅವರ ಆಕರ್ಷಕ ಆಟ ಗಮನ ಸೆಳೆಯಿತು.
ಮೊದಲ ಎರಡು ಸೆಟ್ ಗಳಲ್ಲಿ ಗೆದ್ದು ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಅಹಮಾದಾಬಾದ್ ಡಿಫೆಂಡರ್ಸ್ ಗೆ ಬೆಂಗಳೂರು ತಂಡ ತಕ್ಕ ಪ್ರತ್ಯುತ್ತರ ನೀಡಿತು.ಅಹಮಾದಾಬಾದ್ ಡಿಫೆಂಡರ್ಸ್ ವಿರುದ್ಧ ಬೆಂಗಳೂರು ಟ್ರೋಫಿಡೋಸ್ ೧೪-೧೬, ೭-೧೫, ೧೬-೧೪, ೧೫-೧೯ ಹಾಗೂ ೧೩-೧೫ ರ ಸೆಟ್ ಗಳ ಅಂತರದಿಂದ ಗೆಲುವು ಸಾಧಿಸಿತು.ಬೆಂಗಳೂರು ತಂಡದ ಮುಜೀಬ್ ಅದ್ಭುತ ಬ್ಲ್ಯಾಕ್ ಗಳ ಮೂಲಕ ಗಮನ ಸೆಳೆದರು. ಅಹಮದಾಬಾದ್ ಡಿಫೆಂಡರ್ಸ್ ತಂಡದ ಆಟಗಾರರರು ಎಸಗಿದ ಲೋಪ ಬೆಂಗಳೂರಿಗೆ ವರದಾನವಾಯಿತು. ತರಬೇತುದಾರ ಡೇವಿಡ್ ಲೀ ಅವರ ತಂತ್ರಗಳು ಫಲ ನೀಡಿತು.