ಉಗಾಂಡ ವಿರುದ್ಧ ಕಿವೀಸ್‌ಗೆ ಸುಲಭ ಜಯ
ತೌರಬ. ಜೂ.೧೫- ವೇಗಿಗಳ ನೆರವಿನಿಂದ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ ಕ್ರಿಕೆಟ್ ಶಿಶು ಉಗಾಂಡ ವಿರುದ್ಧ ೯ ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಇದರೊಂದಿಗೆ ಕೇನ್ ಪಡೆ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.
ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ಟಿ೨೦ ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉಗಾಂಡ ೧೮.೪ ಓವರ್‌ಗಳಲ್ಲಿ ಕೇವಲ
೪೦ ರನ್‌ಗಳಿಗೆ ಆಲೌಟ್ ಆಯಿತು. ನ್ಯೂಜಿಲ್ಯಾಂಡ್ ತಂಡ ೫.೨ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೪೧ ರನ್ ಪೇರಿಸಿತು.
ಉಗಾಂಡ ಪರ ಕೆನ್ನೆತ್ ವೈಸ್ವಾ ೧೧ ರನ್ ಹೊಡೆದು ತಂಡದ ಪರ ಗರಿಷ್ಠ ರನ್ ಹೊಡೆದರು. ಫ್ರೆಡ್ ಅಚೆಲೆಮ್ ೯, ದಿನೇಶ್ ೪ ರನ್ ಹೊಡೆದರು.
ನ್ಯೂಜಿಲ್ಯಾಂಡ್ ಪರ ಟಿಮ್ ಸೌಥಿ ೪ಕ್ಕೆ ೩, ಬೌಲ್ಟ್ ೭ಕ್ಕೆ ೨, ಸ್ಯಾಂಟ್ನರ್ ೮ಕ್ಕೆ ೨, ಫರ್ಗ್ಯೂಸನ್ ೯ಕ್ಕೆ ೧ ವಿಕೆಟ್ ಪಡೆದರು.
ಸುಲಭ ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ ಪರ ಫಿನ್ ಅಲೆನ್ ೯, ಡೆವೊನ್ ಕಾನ್ವೆ ಅಜೇಯ ೨೨, ರಚಿನ್ ರವೀಂದ್ರ ಅಜೇಯ ೧ ರನ್ ಗಳಿಸಿದರು.
ಉಗಾಂಡ ಪರ ಅಲಿ ಶಾ ೧ ವಿಕೆಟ್ ಪಡೆದರು.