ಟಿ೨೦ ವಿಶ್ವಕಪ್: ಆಸ್ಟ್ರೇಲಿಯಾ ಶುಭಾರಂಭ
ಬಾರ್ಬಡೋಸ್.ಜೂ. ೬- ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಅವರ ಅದ್ಭುತ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ
ಒಮನ್ ತಂಡದ ವಿರುದ್ಧ ೩೯ ರನ್‌ಗಳ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ.
ಇಲ್ಲಿನ ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆದ ಟಿ೨೦ ವಿಶ್ವಕಪ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ೨೦ ಓವರ್‌ಗಳಲ್ಲಿ
೫ ವಿಕೆಟ್ ನಷ್ಟಕ್ಕೆ ೧೬೪ ರನ್ ಕಲೆ ಹಾಕಿತು. ಒಮನ್ ತಂಡ ೯ ವಿಕೆಟ್ ೧೨೫ ರನ್ ಗಳಿಸಿತು.
ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ (೫೬ ರನ್) ಮತ್ತು ಟ್ರಾವಿಸ್ ಹೆಡ್ (೧೨ರನ್) ಮೊದಲ ವಿಕೆಟ್‌ಗೆ ೧೯ ರನ್
ಸೇರಿಸಿದರು. ನಾಯಕ ಮಿಚೆಲ್ ಮಾರ್ಷ್ (೧೪ರನ್), ಗ್ಲೇನ್ ಮ್ಯಾಕ್ಸ್‌ವೆಲ್ ೦ ರನ್ ಗಳಿಸಿದರು.
ವಾರ್ನರ್ ೨೭ ಎಸೆತಗಳಲ್ಲಿ ಅರ್ಧ ಶತಕ ಹೊಡೆದರು. ವಾರ್ನರ್ ಒಟ್ಟು ೫೬ ರನ್ ಹೊಡೆದರು. ಮಧ್ಯಮ ಕ್ರಮಾಂಕದಲ್ಲಿ ಬಂದ
ಸ್ಟೋಯ್ನಿಸ್ ಸ್ಫೋಟಕ ಬ್ಯಾಟಿಂಗ್ ಮಾಡಿದ ೩೬ ಎಸೆತಗಳಲ್ಲಿ ಅಜೇಯ ೬೭ ರನ್ ಹೊಡೆದರು. ಟಿಮ್ ಡೇವಿಡ್ ೯ ರನ್ ಹೊಡೆದರು.
ಒಮನ್ ಪರ ಮೆಹ್ರಾನ್ ಖಾನ್ ೨, ಬಿಲಾಲ್ ಮತ್ತು ಖಲೀಲ್ ತಲಾ ೧ ವಿಕೆಟ್ ಪಡೆದರು.
೧೬೫ ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಒಮನ್ ತಂಡ ಆಸೀಸ್ ವೇಗಿಗಳ ದಾಳಿಗೆ ತತ್ತರಿಸಿತು. ಒಮನ್ ಪರ ಅಯಾನ್ ಖಾನ್
೩೬, ಮೆಹ್ರಾನ್ ಖಾನ್ ೨೭, ನಾಯಕ ಅಖಿಬ್ ಇಲಿಯಾಸ್ ೧೮ ರನ್ ಹೊಡೆದರು.
ಆಸೀಸ್ ಪರ ಸ್ಟೋಯ್ನಿಸ್ ೧೯ಕ್ಕೆ ೩, ಸ್ಟಾರ್ಕ್ ೨೦ಕ್ಕೆ ೨, ಎಲ್ಲಿಸ್ ೨೮ಕ್ಕೆ ೨, ಜಾಂಪಾ ೨೪ಕ್ಕೆ ೨ ವಿಕೆಟ್ ಪಡೆದರು.