ಉಗಾಂಡ ವಿರುದ್ಧ ಆಫ್ಘಾನ್‌ಗೆ ಭರ್ಜರಿ ಜಯ
ಗಯಾನಾ.ಜೂ.೪- ಎಡಗೈ ವೇಗಿ ಫಾಜಲ್‌ಹಕ್ ಫಾರೂಕಿ ಅದ್ಭುತ ದಾಳಿಯ ನೆರವಿನಿಂದ ಅಫ್ಘಾನಿಸ್ಥಾನ ಕ್ರಿಕೆಟ್ ತಂಡ
ಕ್ರಿಕೆಟ್ ಶಿಶು ಉಗಾಂಡ ವಿರುದ್ಧ ೧೨೫ ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ.
ಇಲ್ಲಿನ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆದ ಟಿ೨೦ ವಿಶ್ವಕಪ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ
ಅಫ್ಘಾನಿಸ್ತಾನ ೨೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೮೩ ರನ್ ಪೇರಿಸಿತು. ಉಗಾಂಡ ತಂಡ ೧೬ ಓವರ್‌ಗಳಲ್ಲಿ
೫೮ ರನ್ ಗಳಿಗೆ ಆಲೌಟ್ ಆಯಿತು.
ಅಫ್ಘಾನಿಸ್ಥಾನ ತಂಡದ ಪರ ಆರಂಭಿಕರಾದ ರೆಹಮಾನ್‌ಹುಲ್ಲಾ ಗುರ್ಬಾಜ್ (೭೬ರನ್) ಹಾಗು ಇಬ್ರಾಹಿಂ ಜರ್ದ್ರಾನ್ (೭೦ರನ್)
ಮೊದಲ ವಿಕೆಟ್‌ಗೆ ೧೫೪ ರನ್ ಸೇರಿಸಿದರು.ನಂತರ ಬಂದ ನಜೀಬ್‌ಹುಲ್ಲಾ ಜರ್ದ್ರಾನ್ ೨, ಮೊಹ್ಮದ್ ನಬಿ ಅಜೇಐ ೧೪,
ಗುಲ್ಬದ್ದೀನ್ ನೈಬ್ ೪, ಅಜಮತ್‌ಹುಲ್ಲಾ ೫, ನಾಯಕ ರಶೀದ್ ಖಾನ್ ಅಜೇಯ ೨ ರನ್ ಗಳಿಸಿದರು.
ಉಗಾಂಡ ಪರ ಕೊಸಮಾಸ್ ೨೫ಕ್ಕೆ೨, ಆಲ್ಪೇಶ್ ೩೩ಕ್ಕೆ ೧ ವಿಕೆಟ್ ಪಡೆದರು.
೧೮೪ ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಉಗಾಂಡ ತಂಡಕ್ಕೆ ಎಡಗೈ ವೇಗಿ ಫಾಜಲ್‌ಹಕ್ ಫಾರೂಕಿ
ದಾಳಿಗೆ ತತ್ತರಿಸಿತು. ಉಗಾಂಡ ಪರ ರೊಬಿಸನ್ (೧೪ ರನ್) ರಿಯಾಜತ್ ಅಲಿ (೧೧ ರನ್)ತಂಡದ ಪರ ಗರಿಷ್ಠ
ರನ್ ಗಳಿಸಿದರು. ಅಫ್ಘಾನಿಸ್ತಾನ ಪರ ಫಾಜಲ್‌ಹಕ್ ಫಾರೂಕಿ ೯ಕ್ಕೆ ೫ ವಿಕೆಟ್ ಪಡೆದರು. ನಾಯಕ ರಶೀದ್ ಮತ್ತು
ನವೀನ್ ತಲಾ ೨ ವಿಕೆಟ್ ಪಡೆದರು.