ಸೂಪರ್ ಓವರ್‌ನಲ್ಲಿ ನಮೀಬಿಯಾಕ್ಕೆ ರೋಚಕ ಜಯ
ನ್ಯೂಯಾರ್ಕ್.ಜೂ.೩- ಆಲ್ರೌಂಡರ್ ಡೇವಿಡ್ ವೀಸೆ ಅವರ ಅಮೋಘ ಬೌಲಿಂಗ್ ಪ್ರದರ್ಶನದ ನೆರವಿನಿಂದ ನಮೀಬಿಯಾ ಕ್ರಿಕೆಟ್ ತಂಡ ಒಮನ್
ವಿರುದ್ಧ ರೋಚಕವಾಗಿ ಸೂಪರ್ ಓವರ್‌ನಲ್ಲಿ ಗೆದ್ದುಕೊಂಡಿದೆ. ಟೂರ್ನಿಯಲ್ಲಿ ಮೊದಲ ಸೂಪರ್ ಓವರ್ ಇದಾಗಿದೆ.
ಇಲ್ಲಿನ ಬ್ರಡ್ಜ್‌ಟೌನ್‌ನಲ್ಲಿ ನಡೆದ ವಿಶ್ವ ಟಿ೨೦ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಒಮನ್ ತಂಡ ೧೯.೪ ಓವರ್‌ಗಳಲ್ಲಿ
೧೦೯ ರನ್‌ಗಳಿಗೆ ಸರ್ವಪತನ ಕಂಡಿತು. ನಮೀಬಿಯಾ ತಂಡ ೨೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೦೯ ರನ್ ಪೇರಿಸಿತು.
೧೧೦ ರನ್‌ಗಳ ಸಾಧಾರಣ ಗುರಿ ಪಡೆದ ನಮೀಬಿಯಾ ಆಘಾತ ಅನುಭವಿಸಿತು. ಆರಂಭಿಕ ಬ್ಯಾಟರ್ ಮೈಕಲ್ ವಾನ್ (೦ರನ್) ಬೌಲ್ಡ್ ಆದರು.
ನಿಕೋಲೋಸ್ ಡಾವಿನ್ (೨೪ ರನ್) ಮತ್ತು ಫ್ರೈಲಿಂಕ್ (೪೫ರನ್) ಎರಡನೆ ವಿಕೆಟ್‌ಗೆ ೪೧ ರನ್ ಸೇರಿಸಿದರು.
ಜೆಜೆ ಸ್ಮಿತ್ (೮ ರನ್) ಮೆಹ್ರಾನ್‌ಗೆ ವಿಕೆಟ್ ಒಪ್ಪಿಸಿದರು.ಕೊನೆಯ ಓವರ್‌ನಲ್ಲಿ ನಮೀಬಿಯಾಕ್ಕೆ ಗೆಲ್ಲಲು ೫ ರನ್ ಬೇಕಿತ್ತು. ಆಗ ದಾಳಿ ಗಿಳಿದ ವೇಗಿ ಮೆಹ್ರಾನ್ ಖಾನ್ ಅವರು ಫ್ರೈಲಿಂಕ್ (೪೫ರನ್), ಮತ್ತು ಗ್ರೀನ್ (೦ರನ್) ಅವರ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು.ಕೊನೆಯ ಎಸೆತದಲ್ಲಿ ನಮೀಬಿಯಾಕ್ಕೆ ೨ ರನ್ ಬೇಕಿದ್ದಾಗ ಡೇವಿಡ್ ವೀಸೆ ೧ ರನ್ ಪಡೆದಿದ್ದರಿಂದ ಪಂದ್ಯ ರೋಚಕ ಟೈನಲ್ಲಿ ಅಂತ್ಯ ಕಂಡಿತು.
ಒಮನ್ ಪರ ಮೆಹ್ರಾನ್ ಖಾನ್ ೭ಕ್ಕೆ ೩ ವಿಕೆಟ್, ಬಿಲಾಲ್ ಖಾನ್ ೨೫ಕ್ಕೆ ೧, ಅಖಿಬ್ ೧೭ಕ್ಕೆ ೧, ಆಯಾನ್ ಖಾನ್ ೧೨ಕ್ಕೆ ೧ ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಒಮನ್ ಪರ ಜೀಶನ್ ೨೨ ರನ್, ಖಲೀದ್ ೩೪ ರನ್, ಅಯಾನ್ ಖಾನ್ ೧೫ ರನ್ ಹೊಡೆದರು.
ನಮೀಬಿಯಾ ಪರ ರೂಬೆನ್ ೨೧ಕ್ಕೆ ೩, ಗೆರಾರ್ಡ್ ೨೦ಕ್ಕೆ ೨, ಬೆರ್ನಾರ್ಡ್ ೨೦ಕ್ಕೆ ೧ ವಿಕೆಟ್ ಪಡೆದರು.
ಸೂಪರ್ ಓವರನಲ್ಲಿ ಗೆದ್ದ ನಮೀಬಿಯಾ
ನಿಗದಿತ ಸಮಯದಲ್ಲಿ ಪಂದ್ಯ ರೋಚಕ ಟೈ ಕಂಡಿದ್ದರಿಂದ ಸೂಪರ್ ಓವರ್ ಮೊರೆ ಹೋಗಬೇಕಾಯಿತು. ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ
ಒಂದು ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ ೨೧ ರನ್ ಗಳಿಸಿತು. ನಮೀಬಿಯಾ ಪರ ವೀಸೆ ೧ ಬೌಂಡರಿ ಹಾಗೂ ೧ ಸಿಕ್ಸರ್ ಬಾರಿಸಿದರು. ತಂಡದ ಮತ್ತೋರ್ವ ಬ್ಯಾಟರ್
ನಾಯಕ ಎರಸ್ಮಾಸ್ ೨ ಬೌಂಡರಿ ಹೊಡೆದರು. ೨೨ ರನ್ ಗುರಿ ಪಡೆದ ಒಮನ್ ೧ ವಿಕೆಟ್ ನಷ್ಟಕ್ಕೆ ೧೦ ರನ್ ಗಳಿಸುವಲ್ಲಿ ಮಾತ್ರ ಶಕ್ತವಾಯಿತು. ಸೂಪರ್ ಓವರ್
ಮಾಡಿದ ವೇಗಿ ವೀಸೆ ಪಂದ್ಯ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.