ಟಿ೨೦ ವಿಶ್ವಕಪ್ ರೋಹಿತ್ ಪಡೆ ತಾಲೀಮು
ನ್ಯೂಯಾರ್ಕ್.ಮೇ.೨೯- ಬಹುನಿರೀಕ್ಷಿತಾ ಟಿ೨೦ ವಿಶ್ವಕಪ್‌ಗೆ ಭಾರತ ಕ್ರಿಕೆಟ್ ತಂಡ ಅಭ್ಯಾಸ ಆರಂಭಿಸಿದೆ.
ಜೂ.೨ರಿಂದ ಟಿ೨೦ ವಿಶ್ವಕಪ್ ಚುಟುಕು ಮಿನಿ ಸಮರ ಆರಂಭವಾಗಲಿದ್ದು ಅಮೆರಿಕ ಮತ್ತು ವೆಸ್ಟ್‌ಇಂಡೀಸ್ ಆತಿಥ್ಯವಹಿಸಿವೆ.
ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಬಹುತೇಕ ಆಟಗಾರರು ಈಗಾಗಲೇ ಅಮೆರಿಕಾಕ್ಕೆ ಬಂದಳಿದಿದ್ದರು.
ಇದೀಗ ನ್ಯೂಯಾರ್ಕ್‌ನಲ್ಲಿ ಭಾರತ ತಂಡ ತಾಲೀಮು ಆರಂಭಿಸಿದೆ.
ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯ ಕುಮಾರ್, ರವೀಂದ್ರ ಜಡೇಜಾ ಮೊದಲ ತರಬೇತಿ ಶಿಬಿರದಲ್ಲಿ
ಪಾಲ್ಗೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು ಸಂಪ್ರದಾಯಿಕ ಎದುರಾಳಿ ಪಾಕಿಸ್ಥಾನ, ಯುಎಸ್‌ಎ, ಐರ್ಲೆಂಡ್, ಕೆನಡಾ
ತಂಡಗಳು ಗುಂಪಿನಲ್ಲಿವೆ.
ಜೂ.೫ರಂದು ರೋಹಿತ್ ಪಡೆ ಐರ್ಲೆಂಡ್ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿವೆ. ಇದಕ್ಕೂ ಮುನ್ನ
ಜೂ.೧ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.