ಡ್ವೇನ್ ಸ್ಮಿತ್‌ಗೆ ಐಸಿಸಿ ನಿಷೇಧ
ದುಬೈ.ಏ.೩-ಭ್ರಷ್ಟಚಾರ ಆರೋಪ ಹಿನ್ನೆಲೆಯಲ್ಲಿ ಐಸಿಸಿ ವೆಸ್ಟ್‌ಇಂಡೀಸ್ ಕ್ರಿಕೆಟಿಗ ಡ್ವೇನ್ ಸ್ಮಿತ್ ಕ್ರಿಕೆಟ್ ಆಡದಂತೆ ಐದು ವರ್ಷಗಳ ಕಾಲ ನಿಷೇಧ ಏರಿದೆ. ಕಳೆದ ವರ್ಷ ಡ್ವೇನ್ ಸ್ಮಿತ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು.
ಶ್ರೀಲಂಕಾ ಕ್ರಿಕೆಟ್ ಮಂಡಳಿ, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಕೆರೆಬಿಯನ್ ಪ್ರೀಮಿಯರ್ ಲೀಗ್‌ಗಳಲ್ಲಿ ಭ್ರಷ್ಟಚಾರ ನೀತಿ ಸಂಹಿತೆಗಳು ಉಲ್ಲಂಘಿಸಿರುವುದನ್ನು ಒಪ್ಪಿಕೊಂಡಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಜತೆಗೆ ಮ್ಯಾಚ್ ಫಿಕ್ಸಿಂಗ್‌ಗಳಲ್ಲೂ ಭಾಗಿಯಾಗಿರುವುದಕ್ಕೆ ಐಸಿಸಿ ತರಾಟೆಗೆ ತೆಗೆದುಕೊಂಡಿದೆ.
ಡ್ವೇನ್ ಸ್ಮಿತ್ ಮೇಲಿದ್ದ ಎಲ್ಲಾ ಆರೋಪಗಳು ತುಂಬ ಗಂಭೀರವಾಗಿದ್ದು ೨೦೨೧ರಲ್ಲಿ ಲಂಕಾ ಪ್ರೀಮಿಯರ್ ಲೀಗ್ ವೇಳೆ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ.