ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತ ಪುರುಷ, ಮಹಿಳಾ ತಂಡ
ನಾಸೌ.ಮೇ.೬- ಭಾರತ ಪುರುಷರ ಮತ್ತು ಮಹಿಳೆಯರ ೪-೪೦೦ ಮೀ. ರಿಲೇ ತಂಡಗಳು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿವೆ.
ಇಂದು ನಡೆದ ವಿಶ್ವ ಅಥ್ಲೆಟಿಕ್ಸ್‌ನ ಎರಡನೆ ಸುತ್ತಿನ ಹೀಟ್ಸ್‌ನ ವಿಭಾಗಗಳಲ್ಲಿ ಎರಡನೆ ಸ್ಥಾನ ಪಡೆದವು.
ಮಹಿಳೆಯರ ವಿಭಾಗದಲ್ಲಿ ರೂಪಾಲ್ ಚೌಧರಿ, ಕನ್ನಡತಿ ಎಂ.ಆರ್.ಪೂವಮ್ಮಾ, ಜ್ಯೋತಿಕಾ ಮತ್ತು ಶುಭ ವೆಂಕಟೇಶನ್ ೩ ನಿಮಿಷ ೨೯.೩೫ ಸೆಕೆ,ಗುರಿಮುಟ್ಟಿತ್ತು.
ಜಮೈಕಾ ೩;೨೮.೫೪ ಸೆಕೆ, ಗುರಿ ಮುಟ್ಟಿ ಮೊದಲ ಸ್ಥಾನ ಪಡೆಯಿತು.
ನಂತರೆ ನಡೆದ ಪುರಷರ ವಿಭಾಗದಲ್ಲಿ ಮೊಹ್ಮದ್ ಅನಾಸ್, ಮೊಹ್ಮದ್ ಅಜ್ಮಲ್, ಆರೊಕಿಯಾ ರಾಜೀವ್ ಮತ್ತು ಅಮೋಜ್ ಜಾಕೊಬ್ ೩ ನಿಮಿಷ ೩.೨೩ ಸೆಕೆ.ಗುರಿ ಮುಟ್ಟಿ
ದ್ವಿತೀಯ ಸ್ಥಾನ ಪಡೆಯಿತು. ಯುಎಸ್ ತಂಡ ೨:೫೯.೯೫ ಸೆಕೆಂ, ಗುರಿ ಮುಟ್ಟಿ ಮೊದಲ ಸ್ಥಾನ ಪಡೆಯಿತು.
ಮೂರು ಹೀಟ್ಸ್‌ನಲ್ಲಿ ಅಗ್ರ ಎರಡು ತಂಡಗಳು ಜು.೨೬ರಿಂದ ಆ.೧೧ರವರೆಗ ನಡೆಯುವ ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿವೆ.
ಮೊದಲ ಹಿಟ್ಸ್‌ನ ಮಹಿಳಾ ವಿಭಾಗದಲ್ಲಿ ಭಾರತ ವನಿತೆಯರ ತಂಡ ಐದನೆ ಸ್ಥಾನ ಪಡೆದು ನಿರಾಸೆ ಅನುಭವಿಸಿತ್ತು. ಪುರುಷರ ತಂಡದಲ್ಲಿ ರಮೇಶ್ ಗಾಯಗೊಂಡಿದ್ದರಿಂದ ಓಡಲು ಆಗಲಿಲ್ಲ.