ತೆಂಗಿನಕಾಯಿ ಮುಚ್ಚೋಲೆ
ಬೇಕಾಗುವ ಪದಾರ್ಥಗಳು:
ಕಾಯಿತುರಿ – ೧ ಲೋಟ
ಇಂಗು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಸೋಡಾ – ಸ್ವಲ್ಪ
ಒಣಮೆಣಸಿನಕಾಯಿ – ೧೦
ಅಕ್ಕಿಹಿಟ್ಟು – ೧ ಲೋಟ
ಎಣ್ಣೆ – ಕರಿಯಲು
ವಿಧಾನ: ಕಾಯಿತುರಿ, ಇಂಗು, ಉಪ್ಪು, ಸೋಡಾ, ಒಣಮೆಣಸಿನಕಾಯಿ ಹಾಕಿ, ನೀರು ಹಾಕಿ ನುಣ್ಣಗೆ ರುಬ್ಬಬೇಕು. ಈ ಮಸಾಲೆಗೆ, ಅಕ್ಕಿಹಿಟ್ಟು ಮತ್ತು ೩ ಚಮಚ ಎಣ್ಣೆ ಹಾಕಿ ಕಲೆಸಿ, ಕೈಗಂಟದ ಹಾಗೆ ನಾದಿ ಚಕ್ಕುಲಿ ಒರಳಿಗೆ ಹಾಕಿ ಒತ್ತಿ ಎಣ್ಣೆಯಲ್ಲಿ ಕರಿಯಬೇಕು.