ಆಲೂ ಮಂಚೂರಿಯನ್
ಬೇಕಾಗುವ ಪದಾರ್ಥಗಳು:
ಮೈದಾಹಿಟ್ಟು – ೪ ಚಮಚ
ಅಕ್ಕಿಹಿಟ್ಟು/ಕಾರ್ನ್‌ಫ್ಲೋರ್ – ೪ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅಚ್ಚಖಾರದಪುಡಿ – ೧ ಚಮಚ
ಆಲೂಗೆಡ್ಡೆ – ಕಾಲು ಕೆ.ಜಿ.
ಎಣ್ಣೆ – ೧ ಸೌಟು – ಕರಿಯಲು
ಈರುಳ್ಳಿ – ೨
ಹಸಿಮೆಣಸಿನಕಾಯಿ – ೪
ಬೆಳ್ಳುಳ್ಳಿ – ೧೦ ತುಂಡು
ಕ್ಯಾಪ್ಸಿಕಮ್ – ೧
ಈರುಳ್ಳಿ ಹೂವು – ಸ್ವಲ್ಪ
ಸೊಯಾಸಾಸ್ – ೧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಟೊಮೊಟೊ ಸಾಸ್ – ೨ ಚಮಚ
ಕೊತ್ತಂಬರಿಸೊಪ್ಪು – ಸ್ವಲ್ಪ
ವಿಧಾನ: ಮೈದಾಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಅಚ್ಚಖಾರದಪುಡಿ, ತಕ್ಕಷ್ಟು ನೀರು ಹಾಕಿ, ಬೋಂಡಾ ಹಿಟ್ಟಿನ ಹದಕ್ಕೆ ಕಲೆಸಬೇಕು. ತೆಳ್ಳಗೆ ಉದ್ದ ಹೆಚ್ಚಿದ ಆಲೂಗೆಡ್ಡೆಯನ್ನು ಹಿಟ್ಟಿನಲ್ಲಿ ಅದ್ದಿಎಣ್ಣೆಯಲ್ಲಿ ಕರಿಯಬೇಕು. ಎಣ್ಣೆಗೆ ಉದ್ದ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಬಾಡಿಸಿ, ಚಿಕ್ಕದಾಗಿ ಹೆಚ್ಚಿದ ಬೆಳ್ಳುಳ್ಳಿ, ಉದ್ದ ಹೆಚ್ಚಿದ ಕ್ಯಾಪ್ಸಿಕಮ್, ಈರುಳ್ಳಿ ಹೂವು, ಸೊಯಾಸಾಸ್, ಉಪ್ಪು, ಟೊಮೊಟೊ ಸಾಸ್ ಹಾಕಿ ಬಾಡಿಸಿ, ಕರಿದ ಆಲೂಗೆಡ್ಡೆ ಹಾಕಿ ಬಾಡಿಸಿ ಇಳಿಸಿ, ಕೊತ್ತಂಬರಿಸೊಪ್ಪು ಹಾಕಬೇಕು. (ಆಪ್ಷನ್ : ಬೇಬಿಕಾರ್ನ್, ಪನ್ನೀರ್, ಬೇಬಿಆಲೂಗೆಡ್ಡೆ).