ಗೋಲಿಬಜೆ (ಮಂಗಳೂರು ಬೋಂಡಾ)
ಬೇಕಾಗುವ ಪದಾರ್ಥಗಳು:
ಮೈದಾಹಿಟ್ಟು – ೧ ಲೋಟ
ಅಕ್ಕಿಹಿಟ್ಟು – ೧ ಚಮಚ
ಇಂಗಿನಪುಡಿ – ಅರ್ಧ ಚಮಚ
ಸೋಡಾ – ಸ್ವಲ್ಪ
ಸಕ್ಕರೆ – ೧ ಚಮಚ
ಕಾಯಿತುರಿ – ಸ್ವಲ್ಪ
ತುರಿದ ಶುಂಠಿ – ೨ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಹೆಚ್ಚಿದ ಈರುಳ್ಳಿ – ೧
ಹೆಚ್ಚಿದ ಕೊತ್ತಂಬರಿಸೊಪ್ಪು – ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ – ೪ – ೬
ಹುಳಿಮೊಸರು – ಹಿಡಿಸುವಷ್ಟು
ಜೀರಿಗೆ – ೨ ಚಮಚ
ವಿಧಾನ: ಮೇಲಿನ ಪದಾರ್ಥಗಳನ್ನು ನೀರು ಬೆರೆಸದೆ ಮೊಸರಲ್ಲೇ ಕಲೆಸಿ, ಉಂಡೆಮಾಡಿ ಎಣ್ಣೆಯಲ್ಲಿ ಕೆಂಪಗೆ ಕರಿದು ಬಿಸಿ ಇರುವಾಗಲೇ ಬಿಸಿ ಇರುವಾಗಲೇ ಚಟ್ನಿ ಜೊತೆಗೆ ಸೇವಿಸಿದರೆ ರುಚಿ ಹೆಚ್ಚು.