ಮೊಸರು ವಡೆ
ಪದಾರ್ಥಗಳು :-
ಉದ್ದಿನ ಬೇಳೆ – ೧ ಲೋಟ
ಗರಂ ಮಸಾಲ – ಸ್ವಲ್ಪ
ಕರಿಕಾಳುಮೆಣಸು – ಸ್ವಲ್ಪ
ಹೆಚ್ಚಿದ ಕಾಯಿತುರಿ – ಸ್ವಲ್ಪ
ಹೆಚ್ಚಿದ ಶುಂಠಿ – ಸ್ವಲ್ಪ
ಉಪ್ಪು- ರುಚಿಗೆ
ಸೋಡಾ- ಸ್ವಲ್ಪ
ಜೀರಿಗೆ – ಸ್ವಲ್ಪ
ಗಟ್ಟಿ ಮೊಸರು – ಸ್ವಲ್ಪ
ಕರಿಕಾಳುಮೆಣಸಿನ ಪುಡಿ – ಸ್ವಲ್ಪ
ಕೊತ್ತಂಬರಿಸೊಪ್ಪು – ಸ್ವಲ್ಪ
ಹಸಿಮೆಣಸಿನಕಾಯಿ- ಸ್ವಲ್ಪ
ಕರಿಯಲು ಎಣ್ಣೆ – ಸ್ವಲ್ಪ
ವಿಧಾನ :- ೧. ನೆಂದ ಉದ್ದಿನ ಬೇಳೆಯನ್ನು ಗಟ್ಟಿಯಾಗಿ ನುಣ್ಣಗೆ ರುಬ್ಬಿ, ಇದಕ್ಕೆ ಗರಂ ಮಸಾಲ, ಕರಿ ಕಾಳುಮೆಣಸು, ಕಾಯಿತುರಿ, ಶುಂಠಿ, ಸೋಡಾ, ಜೀರಿಗೆ, ಉಪ್ಪು, ಹಾಕಿ ಕಲೆಸಿ, ತೂತ ಮಾಡಿದ ಉಂಡೆಯನ್ನು ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಕರಿಯಬೇಕು.
೨. ಗಟ್ಟಿ ಮಾಸರಿಗೆ ಕರಿಕಾಳು ಮೆಣಸಿನಪುಡಿ, ಕೊತ್ತಂಬರಿಸೊಪ್ಪು, ಹಸಿಮೆಣಸಿನಕಾಯಿ ಹೆಚ್ಚಿ ಹಾಕಿ, ಉಪ್ಪು ಹಾಕಿ, ಕದಡಿ, ಇದಕ್ಕೆ ಕರಿದ ವಡೆ ಹಾಕಿ ಫ್ರಿಡ್ಜ್‌ನಲ್ಲಿಟ್ಟು ೧೦ ನಿಮಿಷದ ನಂತರ ಸೇವಿಸಬಹುದು.