ಮಸಾಲ ಪುರಿ
ಬೇಕಾಗುವ ಸಾಮಗ್ರಿಗಳು
*ಪುರಿ
*ಬಟಾಣಿ
*ಕೊತ್ತಂಬರಿ ಸೊಪ್ಪು
*ಪುದೀನ
*ಹಸಿರು ಮೆಣಸಿನಕಾಯಿ
*ಚಕ್ಕೆ
*ಲವಂಗ
*ಮೊಗ್ಗು
*ಸೇವ್
*ಕ್ಯಾರೆಟ್
*ಉಪ್ಪು
*ಧನಿಯಾ ಅನಾನಸ್ ಹೂ
*ಗಸಗಸೆ
*ಬ್ಯಾಡಗಿ ಮೆಣಸಿನಕಾಯಿ
*ಶುಂಠಿ
*ಬೆಳ್ಳುಳ್ಳಿ
*ತೆಂಗಿನಕಾಯಿ ತುರಿ
*ಬೆಲ್ಲ
*ಈರುಳ್ಳಿ
*ಎಣ್ಣೆ
*ಕಲ್ಲು ಉಪ್ಪು
ಮಾಡುವ ವಿಧಾನ :
ಕುಕ್ಕರ್‌ಗೆ ಬಟಾಣಿ, ಸ್ವಲ್ಪ ನೀರು, ಕಲ್ಲು ಉಪ್ಪು ಸೇರಿಸಿ ೨ ವಿಷಲ್ ಕೂಗಿಸಿ. ನಂತರ ಬಟಾಣಿಯನ್ನು ಬೌಲಿಗೆ ಹಾಕಿಡಿ. ತೆಂಗಿನಕಾಯಿ ತುರಿ, ಶುಂಠಿ, ಬೆಳ್ಳುಳ್ಳಿ ,ಪುದೀನಾ, ಕೊತ್ತಂಬರಿ ಸೊಪ್ಪು, ಧನಿಯಾ, ಅನಾನಸ್ ಹೂ, ಗಸಗಸೆ, ಮೊಗ್ಗು, ಲವಂಗ ಚಕ್ಕೆ , ಬ್ಯಾಡಗಿ ಮೆಣಸಿನಕಾಯಿಗಳನ್ನು ಸ್ವಲ್ಪ ನೀರು ಹಾಕಿ, ನುಣ್ಣಗೆ ರುಬ್ಬಿಕೊಂಡು ಕೆಂಪು ಚಟ್ನಿ ರೆಡಿ ಮಾಡಿ. ಬಾಣಲಿಗೆ ಎಣ್ಣೆ ಹಾಕಿ. ಕಾದ ನಂತರ ರುಬ್ಬಿದ ಮಸಾಲಾ, ಉಪ್ಪು, ಬಟಾಣಿ ಬೇಯಿಸಿದ ನೀರು ಹಾಕಿಕೊಂದು ಬೇಯಿಸಿ.
ಹಸಿರು ಮೆಣಸಿನಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿಯನ್ನು ಸ್ವಲ್ಪ ನೀರು ಹಾಕಿ ರುಬ್ಬಿ, ಹಸಿರು ಮೆಣಸಿನಕಾಯಿ ಚಟ್ನಿ ರೆಡಿ ಮಾಡಿಕೊಳ್ಳಿ. ಪಾತ್ರೆಗೆ ನೀರು, ಬೆಲ್ಲ ಹಾಕಿ ಕಾಯಿಸಿ, ಬೆಲ್ಲದ ಪಾಕ ತಯಾರಿಸಿಕೊಳ್ಳಿ. ಬೌಲಿಗೆ ಪುರಿ ಮುರಿದು ಹಾಕಿ. ಇದಕ್ಕೆ ಬೇಯಿಸಿದ ಬಟಾಣಿ ಹಾಕಿಕೊಂಡು, ಜೊತೆಯಲ್ಲಿ ಕೆಂಪು ಚಟ್ನಿ, ಹಸಿ ಮೆಣಸಿನಕಾಯಿ ಚಟ್ನಿ, ಕ್ಯಾರೆಟ್ ತುರಿ, ಸೇವ್, ರೆಡಿ ಮಾಡಿ ಕೊಂಡ ಬೆಲ್ಲದ ಪಾಕ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಉಪ್ಪು ಹಾಕಿ ಚೆನ್ನಾಗಿ ಬೆರೆಸಿದರೆ ಮಸಾಲಾ ಪುರಿ ಸವಿಯಲು ರೆಡಿ.