ಆಲೂ ಗೋಬಿ ಮಂಚೂರಿ
ಬೇಕಾಗುವ ಸಾಮಗ್ರಿಗಳು
*ಹೂ ಕೋಸು – ೧/೪ ಭಾಗ
*ಆಲೂಗಡ್ಡೆ – ೧/೪ ಕೆ.ಜಿ
*ಹಾಲು – ೧ ಕಪ್
*ತೆಂಗಿನ ಕಾಯಿ ತುರಿ – ೧ ಕಪ್
*ಧನಿಯಾ ಪುಡಿ – ೨ ಕಪ್
*ದಪ್ಪ ಮೆಣಸಿನಕಾಯಿ – ೫
*ಅಚ್ಚಖಾರದ ಪುಡಿ – ೨ ಚಮಚ
*ಗರಂ ಮಸಾಲಾ – ೨ ಚಮಚ
*ಶುಂಠಿ ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ನೀರು – ೨೦೦ ಮಿ.ಲೀ
*ಟೊಮೆಟೊ – ೨
*ಚಕ್ಕೆ – ೭
*ಲವಂಗ – ೮
*ಏಲಕ್ಕಿ – ೭
*ಅರಿಶಿಣ – ೧ ಚಮಚ
*ಗೋಡಂಬಿ – ೧೦
*ಈರುಳ್ಳಿ – ೨
*ಕಸೂರಿ ಮೇಥಿ – ೨ ಚಮಚ
*ಉಪ್ಪು –
*ಎಣ್ಣೆ-
ಮಾಡುವ ವಿಧಾನ :
ಚಕ್ಕೆ, ಏಲಕ್ಕಿ, ಲವಂಗ, ಗೋಡಂಬಿ, ತೆಂಗಿನ ಕಾಯಿ ತುರಿಗೆ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪ್ಯಾನ್‌ಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಅರಿಶಿಣ ಹಾಕಿ ಬೇಯಿಸಿದ ಆಲೂಗಡ್ಡೆ, ಹೂ ಕೋಸು ಹಾಕಿ ಮಿಕ್ಸ್ ಮಾಡಿ. ನಂತರ ಟೊಮೆಟೊ, ಹಸಿಮೆಣಸಿನಕಾಯಿ, ಧನಿಯಾ ಪುಡಿ, ಅಚ್ಚ ಖಾರದಪುಡಿ, ಗರಂ ಮಸಾಲವನ್ನು ರುಬ್ಬಿಕೊಳ್ಳಿ. ರುಬ್ಬಿಟ್ಟುಕೊಂಡ ಮಸಾಲಾ, ನೀರು, ಉಪ್ಪು, ಹಾಲು ಹಾಕಿ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ ಹಾಕಿ ಮಿಕ್ಸ್ ಮಾಡಿದರೆ, ಆಲೂ ಗೋಬಿ ಮಂಚೂರಿ ಸವಿಯಲು ಸಿದ್ಧ.