ಬ್ರೆಡ್ ಮಸಾಲಾ
ಬೇಕಾಗುವ ಸಾಮಗ್ರಿಗಳು
*ಬ್ರೆಡ್ – ೪ ಪೀಸ್
*ಬೆಣ್ಣೆ – ೪ ಚಮಚ
*ಈರುಳ್ಳಿ – ೪
*ಟೊಮೆಟೊ – ೪
*ಅರಿಶಿಣ – ೧/೨ ಚಮಚ
*ಎಣ್ಣೆ – ೩ ಚಮಚ
*ಕ್ಯಾರೆಟ್ ತುರಿ -೪
*ಅಚ್ಚಖಾರದ ಪುಡಿ – ೨ ಚಮಚ
*ಗರಂ ಮಸಾಲ ಪುಡಿ – ೨ ಚಮಚ
*ಚಾಟ್ ಮಸಾಲ – ೨ ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಎಣ್ಣೆ – ೫೦ ಮಿ.ಲೀ
ಮಾಡುವ ವಿಧಾನ :
ಪ್ಯಾನ್‌ಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಅರಿಶಿಣ, ಟೊಮೆಟೊ ಹಾಕಿ ಫ್ರೈ ಮಾಡಿ. ಇದಕ್ಕೆ ಕ್ಯಾರೆಟ್ ತುರಿ, ಅಚ್ಚಖಾರದ ಪುಡಿ, ಗರಂ ಮಸಾಲ, ಚಾಟ್ ಮಸಾಲಾ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತವಾಗೆ ಬೆಣ್ಣೆ ಹಾಕಿ, ಬ್ರೆಡ್ ಪೀಸ್‌ಗಳು ಹಾಗೂ ತಯಾರಿಸಿಕೊಂಡ ಮಸಾಲ ಹಾಕಿ. ಈಗ ರುಚಿ ರುಚಿಯಾದ ಬ್ರೆಡ್ ಮಸಾಲಾ ತಿನ್ನಲು ರೆಡಿ.