ಪನೀರ್ ಪೀಸ್ ಸಮೋಸ
*ಪನೀರ್ – ೨೫೦ ಗ್ರಾಂ
*ಓಂ ಕಾಳು – ೧ ಚಮಚ
*ಹಸಿ ಬಟಾಣಿ –
*ಕೊತ್ತಂಬರಿ ಸೊಪ್ಪು-
*ವನಸ್ಪತಿ – ೧೫೦ ಗ್ರಾಂ
*ಧನಿಯಾ ಪುಡಿ – ೨ ಚಮಚ
*ಮೈದಾ – ೨೫೦ ಗ್ರಾಂ
*ಜೀರಿಗೆ ಪುಡಿ – ೧ ಚಮಚ
*ಎಣ್ಣೆ – ೧ ಲೀ.
*ಜೀರಿಗೆ – ೧ ಚಮಚ
*ಗರಂ ಮಸಾಲ – ೧ ಚಮಚ
*ಅರಿಶಿಣ – ೧/೨ ಚಮಚ
*ಅಚ್ಚಖಾರದ ಪುಡಿ – ೧ ಚಮಚ
*ಶುಂಠಿ –
*ಉಪ್ಪು –
ಮಾಡುವ ವಿಧಾನ :
ತವಾದಲ್ಲಿ ೩ ಚಮಚ ಎಣ್ಣೆ ಕಾಯಿಸಿ. ಇದರಲ್ಲಿ ಜೀರಿಗೆ, ತುರಿದ ಶುಂಠಿ, ಗರಂ ಮಸಾಲ, ಅಚ್ಚಖಾರದ ಪುಡಿ, ಧನಿಯಾ ಪುಡಿ, ಜೀರಿಗೆ, ಅರಿಶಿಣ ಪುಡಿಯನ್ನು ಒಂದೊಂದಾಗಿ ಹಾಕುತ್ತಾ ಚೆನ್ನಾಗಿ ಹುರಿದು ಕೊಳ್ಳಿ. ಹುರಿದ ಮಸಾಲೆ ಘಮ್ಮೆಂದ ನಂತರ ಇದಕ್ಕೆ ಚಿಕ್ಕದಾಗಿ ಕಟ್ ಮಾಡಿದ ಪನೀರ್ ಹಾಕಿ. ಹಸಿ ಬಟಾಣಿ, ಉಪ್ಪು, ಕೊತ್ತಂಬರಿ ಸೊಪ್ಪನ್ನು ಇದಕ್ಕೆ ಬೆರೆಸಿ. ಬೌಲ್‌ನಲ್ಲಿ ಮೈದಾಹಿಟ್ಟು, ಕರಗಿದ ವನಸ್ಪತಿ,ಉಪ್ಪು, ಓಂಕಾಳು, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕೊಳ್ಳುತ್ತಾ, ಗಂಟುಗಳಾಗದಂತೆ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಿ. ಇದನ್ನು ಚಪಾತಿಯಂತೆಯೇ ಲಟ್ಟಿಸಿ. ನಾಲ್ಕು ಭಾಗಗಳಾಗಿ ಕತ್ತರಿಸಿ. ಎಲ್ಲಾ ನಾಲ್ಕು ಭಾಗಗಳಿಗೆ ಹುರಿದುಕೊಂಡ ಪನೀರ್ ಮಿಶ್ರಣವನ್ನಿಟ್ಟು ಸಮೋಸ ರೀತಿ ಮಾಡಿ. ಬಾಣಲಿಗೆ ಎಣ್ಣೆ ಹಾಕಿ, ಕಾದ ನಂತರ ಎಣ್ಣೆಯಲ್ಲಿ ಮಿಶ್ರಣವನ್ನು ಕರಿದರೆ, ಪನೀರ್ ಪೀಸ್ ಸಮೋಸ ಸವಿಯಲು ಸಿದ್ಧ.