ಪಾವ್ ಬಾಜಿ
ಬೇಕಾಗುವ ಸಾಮಗ್ರಿಗಳು
*ಪಾವ್ ಬನ್ – ೧
*ಈರುಳ್ಳಿ – ೧
*ಕ್ಯಾರೆಟ್ – ೨
*ಹಸಿ ಬಟಾಣಿ – ೫೦ ಗ್ರಾಂ
*ಹೂಕೋಸು – ೧
*ಶುಂಠಿ ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ದಪ್ಪ ಮೆಣಸಿನಕಾಯಿ – ೫೦ ಗ್ರಾಂ
*ಟೊಮೆಟೊ – ೫೦ ಗ್ರಾಂ
*ಆಲೂಗಡ್ಡೆ – ೨
*ಅಚ್ಚಖಾರದ ಪುಡಿ- ೧ ಚಮಚ
*ಪಾವ್‌ಬಾಜಿ ಮಸಾಲ – ೧ ಚಮಚ
*ಅರಿಶಿಣ – ೧ ಚಮಚ
*ಕೊತ್ತಂಬರಿ ಸೊಪ್ಪು –
*ನಿಂಬೆರಸ – ಒಂದೂವರೆ ಚಮಚ
*ಉಪ್ಪು – ೧ ಚಮಚ
*ಬೆಣ್ಣೆ – ೧ ಚಮಚ
ಮಾಡುವ ವಿಧಾನ :
ಕುಕ್ಕರ್‌ಗೆ ಕ್ಯಾರೆಟ್, ಹಸಿ ಬಟಾಣಿ, ಹೂಕೋಸು, ಸ್ವಲ್ಪ ಉಪ್ಪು, ನೀರು ಹಾಕಿ ಬೇಯಲು ಬಿಡಿ. ಬಾಣಲಿಗೆ ಬೆಣ್ಣೆ ಹಾಖಿ ಬಿಸಿಯಾದ ನಂತರ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್‌ನಲ್ಲಿ ಬೆಂದಿರುವ ಪದಾರ್ಥಗಳನ್ನು ಬಾಣಲಿಗೆ ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಉಪ್ಪು ಹಾಕಿ ಕಲಸಿಕೊಂಡು, ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಆಲೂಗಡ್ಡೆ, ಕುಕ್ಕರ್‌ನಲ್ಲಿರುವ ನೀರನ್ನೂ ಹಾಕಿ ಮತ್ತೊಮ್ಮೆ ಕಲಸಿ. ಅಚ್ಚಖಾರದ ಪುಡಿ, ಪಾವ್ ಬಾಜಿ ಮಸಾಲ, ಅರಿಶಿಣ ಹಾಕಿ ಮ್ಯಾಶ್ ಮಾಡಿ. ಸ್ವಲ್ಪ ನೀರು, ಕೊತ್ತಂಬರಿ ಸೊಪ್ಪು, ಮತ್ತೆ ಸ್ವಲ್ಪ ಆಲೂಗಡ್ಡೆ ಹಾಕಿ ಮತ್ತೊಮ್ಮೆ ಎಲ್ಲವನ್ನೂ ಚೆನ್ನಾಗಿ ಮ್ಯಾಶ್ ಮಾಡಿ. ಸ್ವಲ್ಪ ಹೊತ್ತು ಬೇಯಲು ಬಿಟ್ಟು ನಿಂಬೆರಸ, ಕಸೂರಿ ಮೇಥಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
ಪಾವ್ ಬನ್ ತೆಗೆದುಕೊಂಡು, ಮಧ್ಯದಲ್ಲಿ ಕಟ್ ಮಾಡಿಕೊಳ್ಳಿ. ಪ್ಯಾನ್ ಬಿಸಿ ಮಾಡಿ. ಕಸೂರಿ ಮೇಥಿ, ಸ್ವಲ್ಪ ಉಪ್ಪು ಸೇರಿಸಿ. ಈಗ ಕಟ್ ಮಾಡಿರುವ ಪಾವ್ ಬನ್‌ನ್ನು ಪ್ಯಾನ್‌ನಲ್ಲಿ ಇಟ್ಟು, ಪಾವ್ ಬನ್ ಮೇಲೆ ಸ್ವಲ್ಪ ಬೆಣ್ಣೆ ಹಚ್ಚಿ ಬನ್ ಅನ್ನು ಚೆನ್ನಾಗಿ ಅದುಮಿ. ಈಗ ನಿಮ್ಮ ನೆಚ್ಚಿನ ಪಾವ್‌ಬಾಜಿ ರೆಡಿ.