ಆಲೂಟಿಕ್ಕಿ
ಬೇಕಾಗುವ ಸಾಮಗ್ರಿಗಳು
*ಆಲೂಗಡ್ಡೆ – ೪
*ಬಟಾಣಿ – ೧೦೦ ಗ್ರಾಂ
*ಓಟ್ಸ್ – ೧೦೦ ಗ್ರಾಂ
*ಕಾರ್ನ್ ಫ್ಲೋರ್ – ೨ ಚಮಚ
*ಬ್ರೆಡ್ ಕ್ರಮ್ಸ್ – ೩ ಚಮಚ
*ಬ್ರೆಡ್ – ೨
*ಅಚ್ಚಖಾರದ ಪುಡಿ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಕೊತ್ತಂಬರಿ ಸೊಪ್ಪು – ೧ ಚಮಚ
*ಉಪ್ಪು – ೧ ಚಮಚ
*ಎಣ್ಣೆ – ೧/೨ ಲೀಟರ್
ಮಾಡುವ ವಿಧಾನ :
ಬೌಲಿಗೆ ಕಾರ್ನ್‌ಫ್ಲೋರ್, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕಲಸಿಟ್ಟುಕೊಳ್ಳಿ. ಬಟ್ಟಲಿಗೆ ಬೇಯಿಸಿದ ಆಲೂಗಡ್ಡೆ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಬೇಯಿಸಿದ ಬಟಾಣಿ, ಓಟ್ಸ್, ನೆನೆಸಿದ ಬ್ರೆಡ್, ಉಪ್ಪು, ಧನಿಯಾ ಪುಡಿ, ಅಚ್ಚಖಾರದ ಪುಡಿ, ಕೊತ್ತಂಬರಿ ಸೊಪ್ಪು, ಹಾಕಿ ಎಲ್ಲವೂ ಸರಿಯಾಗಿ ಬೆರೆತು ಕೊಳ್ಳುವಂತೆ ಕಲಸಿ. ಈ ಮಿಶ್ರಣವನ್ನು ಉಂಡೆ ಮಾಡಿಕೊಂಡು ಕಾರ್ನ್‌ಫ್ಲೋರ್ ಮಿಶ್ರಣದಲ್ಲಿ ಅದ್ದಿ, ಬ್ರೆಡ್ ಕ್ರಮ್‌ನಲ್ಲಿ ಹೊರಳಿಸಿಕೊಂಡು, ಕಾದ ಎಣ್ಣೆಯಲ್ಲಿ ಹದವಾಗಿ ಕರಿಯಿರಿ. ಈಗ ಗರಿಗರಿಯಾದ ಆಲೂಟಿಕ್ಕಿ ಸವಿಯಲು ರೆಡಿ.