ನಿಪ್ಪಟ್ಟು
ಬೇಕಾಗುವ ಸಾಮಗ್ರಿಗಳು
*ಮೈದಾ ಹಿಟ್ಟು – ೨೫೦ ಗ್ರಾಂ
*ಅಕ್ಕಿಹಿಟ್ಟು – ೫೦ ಗ್ರಾಂ
*ಕಡ್ಲೆಹಿಟ್ಟು – ೫೦ ಗ್ರಾಂ
*ಹುರಿಗಡಲೆ – ೫೦ ಗ್ರಾಂ
*ಕಡ್ಲೆಕಾಯಿ ಬೀಜ – ೫೦ ಗ್ರಾಣ
*ವನಸ್ಪತಿ – ೫೦ ಗ್ರಾಂ
*ತುಪ್ಪ – ೫೦ ಗ್ರಾಂ
*ಉಪ್ಪು – ರುಚಿಗೆ ತಕ್ಕಷ್ಟು
*ಬ್ಯಾಡಗಿ ಮೆಣಸಿನಕಾಯಿ – ೫೦ ಗ್ರಾಂ
*ಕಾಳು ಮೆಣಸು- ೧/೨ ಚಮಚ
ಮಾಡುವ ವಿಧಾನ :
ಪ್ಯಾನ್‌ಗೆ ವನಸ್ಪತಿ, ತುಪ್ಪ ಹಾಕಿ ಬಿಸಿ ಮಾಡಿ. ಹುರಿಗಡಲೆ, ಕಡ್ಲೆ ಕಾಯಿ ಬೀಜ, ಬ್ಯಾಡಗಿ ಮೆಣಸಿನಕಾಯಿಯನ್ನು ಪುಡಿ ಮಾಡಿ ಕೊಳ್ಳಿ. ಬೌಲಿಗೆ ಬಿಸಿ ಮಾಡಿದ ತುಪ್ಪ, ವನಸ್ಪತಿ, ಮೈದಾಹಿಟ್ಟು, ಅಕ್ಕಿಹಿಟ್ಟು, ಕಡ್ಲೆಹಿಟ್ಟು, ತಯಾರಿಸಿಕೊಂಡ ಪುಡಿ, ಉಪ್ಪು, ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಚಿಕ್ಕ ಚಿಕ್ಕದಾಗಿ ಲಟ್ಟಿಸಿಕೊಳ್ಳಿ. ಇದನ್ನು ಕಾದ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೂ ಕರಿಯಿರಿ. ಈಗ ರುಚಿ-ರುಚಿಯಾದ ಗರಿಗರಿ ನಿಪ್ಪಟ್ಟು ರೆಡಿ.