ಬೀಟ್ ರೋಟ್ ಮಜ್ಜಿಗೆ ಹುಳಿ
ಬೇಕಾಗುವ ಸಾಮಗ್ರಿಗಳು
*ಬೀಟ್‌ರೋಟ್ – ೧
*ಬ್ಯಾಡಗಿ ಮೆಣಸಿನಕಾಯಿ – ೫
*ಶುಂಠಿ – ೧/೨ ಪೀಸ್
*ಬೆಳ್ಳುಳ್ಳಿ – ೧
*ಹಸಿರು ಮೆಣಸಿನಕಾಯಿ – ೩
*ಕಾಳು ಮೆಣಸು – ೧ ಚಮಚ
*ಸಾಸಿವೆ – ೧ ಚಮಚ
*ಜೀರಿಗೆ – ೧ ಚಮಚ
*ಕರಿಬೇವು – ೧೦ ಎಲೆ
*ಕೊತ್ತಂಬರಿ ಸೊಪ್ಪು – ೨ ಚಮಚ
*ತೆಂಗಿನಕಾಯಿ ತುರಿ -೧/೨ ಕಪ್
*ಇಂಗು – ೧/೨ ಚಮಚ
*ಮೊಸರು – ೧/೨ ಕಪ್
*ಉಪ್ಪು – ೧ ಚಮಚ
*ನೀರು –
*ಎಣ್ಣೆ –
ಮಾಡುವ ವಿಧಾನ :
ಪಾತ್ರೆಗೆ ಬೀಟ್‌ರೋಟ್ ಹಾಗೂ ನೀರು ಹಾಕಿ ಬೇಯಲು ಬಿಡಿ. ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ತೆಂಗಿನಕಾಯಿ ತುರಿ, ಕಾಳು ಮೆಣಸು, ಜೀರಿಗೆ, ಕೊತ್ತಂಬರಿ ಸೊಪ್ಪು, ನೀರು ಹಾಕಿ ಚೆನ್ನಾಗಿ ರುಬ್ಬಿ ಕೊಳ್ಳಿ. ಚಿಕ್ಕ ಪ್ಯಾನ್‌ಗೆ ಎಣ್ಣೆ ಹಾಕಿ ಕಾದ ಮೇಲೆ ಸಾಸಿವೆ, ಬ್ಯಾಡಗಿ ಮೆಣಸಿನಕಾಯಿ, ಉಪ್ಪು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಬೀಟ್ ರೋಟ್ ಬೆಂದ ಮೇಲೆ ನೀರು ಸೋಸಿಕೊಂಡು ಪಾತ್ರೆಗೆ ಹಾಕಿ, ಮೊಸರು, ಉಪ್ಪು, ರುಬ್ಬಿಕೊಂಡ ಪೇಸ್ಟ್, ಒಗ್ಗರಣೆ ಹಾಕಿ ಕಲಸಿದರೆ ಬೀಟ್ ರೋಟ್ ಮಜ್ಜಿಗೆ ಹುಳಿ ಸವಿಯಲು ಸಿದ್ಧ.