ಬದನೆಕಾಯಿ ಗೊಜ್ಜು
ಬೇಕಾಗುವ ಸಾಮಾಗ್ರಿಗಳು :
ಬದನೆಕಾಯಿ ೪
ಟೊಮೆಟೊ ೧
ಹಸಿರು ಮೆಣಸಿನಕಾಯಿ ೨
ಒಣ ಮೆಣಸಿನಕಾಯಿ
ಬೆಳ್ಳುಳ್ಳಿ ೪ ರಿಂದ ೫ ಎಸೆಳು
ಜೀರಿಗೆ ೧ ಚಮಚ
ಸಲ್ಪ ಕೊತ್ತಂಬರಿ ಸೊಪ್ಪು
ಹುಣಸೆಹಣ್ಣಿನ ರಸ ಅರ್ಧ ಕಪ್
ಬೆಲ್ಲಅರ್ಧ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ? ಎಣ್ಣೆ ೧ ಚಮಚ
ಸಾಸಿವೆ ಕಾಲು ಚಮಚ
ಜೀರಿಗೆ ಕಾಲು ಚಮಚ
ಅರಿಷಿಣ ಕಾಲು ಚಮಚ
ಕರಿಬೇವು ೫ ರಿಂದ ೬
ಹೆಚ್ಚಿದ ಈರುಳ್ಳಿ ೧
ಮಾಡುವ ವಿಧಾನ :
ಕುಕ್ಕರ್ ನಲ್ಲಿ ಹೆಚ್ಚಿದ ಬದನೆಕಾಯಿ, ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಅರ್ಧ ಕಪ್ ನೀರು ಸೇರಿಸಿ ೧ ವಿಷಲ್ ಕೂಗಿಸಿ.
ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ನಂತರ ಸಾಸಿವೆ, ಜೀರಿಗೆ, ಅರಿಷಿಣ , ಒಣ ಮಣಸಿನಕಾಯಿ ಮತ್ತು ಕರಿಬೇವು ಹಾಕಿ ಬಾಡಿಸಿ. ನಂತರ ಈರುಳ್ಳಿ ಯನ್ನು ಸೇರಿಸಿ ಚನ್ನಾಗಿ ಬೇಯಿಸಿಕೊಳ್ಳಿ. ಇದಕ್ಕೆ ಹುಣಸೆಹಣ್ಣಿನ ರಸ ಮತ್ತು ಬೆಲ್ಲ ಸೇರಿಸಿ ಕೈಯಾಡಿಸಿ. ನಂತರ ಕುಕ್ಕರ್ ನಲ್ಲಿ ಬೇಯಿಸಿದ ತರಕಾರಿ ನೀರನ್ನು ಒಗ್ಗರಣೆಗೆ ಸೇರಿಸಿ. ಬೇಯಿಸಿದ ತರಕಾರಿಯನ್ನು ಚನ್ನಾಗಿ ಹಿಸುಕಿ ಒಗ್ಗರಣೆಗೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ೨ ನಿಮಿಷ ಕುದಿಯಲು ಬಿಡಿ. ನಂತರ ಕೊತ್ತಂಬರಿ ಸೊಪ್ಪು ಹಾಕಿ ಕೈಯಾಡಿಸಿದರೆ ಬಿಸಿ ಗೊಜ್ಜು ಊಟಕ್ಕೆ ರೆಡಿಯಾಗುತ್ತದೆ.