ಆಂಬೂರ್ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು
*ಜೀರಾ ಅಕ್ಕಿ – ೧ ಕಪ್
*ಚಿಕನ್ – ೧/೨ ಕೆ.ಜಿ
*ಚಕ್ಕೆ – ೪
*ಲವಂಗ – ೪
*ಏಲಕ್ಕಿ – ೧೦
*ಪಲಾವ್ ಎಲೆ – ೩
*ಮೊಗ್ಗು – ೨
*ಈರುಳ್ಳಿ – ಒಂದೂವರೆ
*ಟೊಮೆಟೋ – ೨
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ -೧ ಚಮಚ
*ಕೊಬ್ಬರಿ ತುರಿ – ೨ ಚಮಚ
*ಮೊಸರು – ೩ ಚಮಚ
*ಪುದೀನ – ಸ್ವಲ್ಪ
*ಕೊತ್ತಂಬರಿ- ಸ್ವಲ್ಪ
*ಹಸಿರು ಮೆಣಸಿನಕಾಯಿ – ೪
*ನಿಂಬೆರಸ – ೧/೨ ಚಮಚ
*ಅಚ್ಚಖಾರದ ಪುಡಿ – ೧ ಚಮಚ
*ಅರಿಶಿಣ – ೧/೨ ಚಮಚ
*ತುಪ್ಪ – ೩ ಚಮಚ
*ಸೌತೇ ಕಾಯಿ – ೧
*ಉಪ್ಪು – ೧ ಚಮಚ
*ಎಣ್ಣೆ – ೨೦೦ ಮಿ.ಲೀ
ಮಾಡುವ ವಿಧಾನ:
ಪಾತ್ರೆಗೆ ನೀರು ಹಸಿರು ಮೆಣಸಿನಕಾಯ ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು, ಅರಿಶಿಣ ಹಾಕಿ ಕಾಯಲು ಬಿಡಿ. ನಂತರ ನೆನೆಸಿದ ಜೀರಾ ಅಕ್ಕಿ ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ. ಕುಕ್ಕರ್‌ಗೆ ಎಣ್ಣೆ ಹಾಕಿ ಬಿಸಿಯಾಗುತ್ತಿದ್ದಂತೆ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಮೊಗ್ಗನ್ನು ಹಾಕಿ ಹುರಿಯಿರಿ. ಇದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ, ಚಿಕನ್ ಪೀಸ್, ಟೊಮೆಟೋ ಮೊಸರು, ಅಚ್ಚಖಾರದ ಪುಡಿ, ಅರಿಶಿಣ, ಪುದೀನ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ೧ ವಿಷಲ್ ಕೂಗಿಸಿ. ನಂತರ ಅರ್ಧ ಬೆಂದ ಅನ್ನವನ್ನು ಹಾಕಿ ಮಿಕ್ಸ್ ಮಾಡಿ. ೧ ರಿಂದ ೨ ವಿಷಲ್ ಕೂಗಿಸಿ. ಚಿಕ್ಕ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹೆಚ್ಚಿಟ್ಟ ಈರುಳ್ಳಿಯನ್ನು ಹಾಕಿ ಫ್ರೈ ಮಾಡಿ. ಹುರಿದ ಈರುಳ್ಳಿಯನ್ನು ಬಿರಿಯಾನಿ ಮೇಲೆ ಹಾಕಿ. ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದೀನ, ತೆಂಗಿನಕಾಯಿ ತುರಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೌಲ್‌ಗೆ ಈರುಳ್ಳಿ, ಸೌತೇಕಾಯಿ, ಟೊಮೆಟೋ, ಮೊಸರು, ರುಬ್ಬಿದ ಮಸಾಲ ಹಾಕಿ ಕಲಸಿ ರಾಯ್ತ ತಯಾರಿಸಿಕೊಂಡರೆ ಆಂಬೂರ್ ಬಿರಿಯಾನಿ ಸವಿಯಲು ರೆಡಿ.