ಬಾಂಗಡೆ ಫಿಶ್ ಗಸಿ ಫ್ರೈ
ಬೇಕಾಗುವ ಸಾಮಗ್ರಿಗಳು
*ಬಾಂಗಡೆ ಫಿಶ್ – ೪
*ಈರುಳ್ಳಿ – ೧
*ಬೆಳ್ಳುಳ್ಳಿ – ೪
*ಶುಂಠಿ – ಸ್ವಲ್ಪ
*ಬ್ಯಾಡಗಿ ಮೆಣಸಿನಕಾಯಿ – ೨೫
*ಹಸಿರು ಮೆಣಸಿನಕಾಯಿ – ೨
*ಮೆಂತ್ಯ – ೧/೨ ಚಮಚ
*ಜೀರಿಗೆ – ೧/೨ ಚಮಚ
*ಕಾಳು ಮೆಣಸು – ೧ ಚಮಚ
*ಓಂ ಕಾಳು – ೧ ಚಮಚ
*ಧನಿಯಾ – ೨ ಚಮಚ
*ಅರಿಶಿಣ – ೧/೨ ಚಮಚ
*ಹುಣಸೆ ಹಣ್ಣು – ನಿಂಬೆಗಾತ್ರ
*ತೆಂಗಿನ ತುರಿ – ೪ ಚಮಚ
*ಕರಿಬೇವು – ೫
ಮಾಡುವ ವಿಧಾನ :
ಪ್ಯಾನ್‌ಗೆ ಧನಿಯಾ, ಓಂ ಕಾಳು ಹಾಕಿ ಚೆನ್ನಾಗಿ ಹುರಿಯಿರಿ. ತಣ್ಣಗಾದ ನಂತರ ಇದರೊಂದಿಗೆ ಬ್ಯಾಡಗಿ ಮೆಣಸಿನಕಾಯಿ, ಮೆಂತ್ಯ, ಜೀರಿಗೆ, ಕಾಳು ಮೆಣಸು, ಶುಂಠಿ, ಬೆಳ್ಳುಳ್ಳಿ, ಹುಣಸೆಹಣ್ಣು, ತೆಂಗಿನ ಕಾಯಿ ತುರಿ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲಿಯಲ್ಲಿ ಎಣ್ಣೆ ಬಿಸಿ ಮಾಡಿ. ಕರಿಬೇವು, ಈರುಳ್ಳಿ, ಅರಿಶಿಣ, ರುಬ್ಬಿರುವ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಹಸಿರು ಮೆಣಸಿನಕಾಯಿ, ಬಾಂಗಡೆ ಫಿಶ್ ಹಾಕಿ ಮುಚ್ಚಳ ಮುಚ್ಚಿ ಹದವಾಗಿ ಬೇಯಿಸಿ ತೆಗೆದರೆ ಬಾಂಗಡೆ ಫಿಶ್ ಫ್ರೈ ಸವಿಯಲು ರೆಡಿ.