ಚಿಕನ್ ಚೆಟ್ಟಿನಾಡು ಮಸಾಲ
ಬೇಕಾಗುವ ಸಾಮಗ್ರಿಗಳು
*ಚಿಕನ್ ಪೀಸ್ – ೧/೪ ಕೆ.ಜಿ
*ಬ್ಯಾಡಗಿ ಮೆಣಸಿನಕಾಯಿ – ೬
*ಹಸಿರು ಮೆಣಸಿನಕಾಯಿ – ೩
*ಅಚ್ಚಖಾರದ ಪುಡಿ – ೨ ಚಮಚ
*ತೆಂಗಿನ ಕಾಯಿ ತುರಿ – ೧/೨ ಕೆ.ಜಿ
*ಕಾಳು ಮೆಣಸು – ೨೫೦ ಗ್ರಾಂ
*ಬಿಳಿ ಎಳ್ಳು – ೨೫೦ ಗ್ರಾಂ
*ಗಸಗಸೆ – ೨ ಚಮಚ
*ಕರಿಬೇವು – ೧೦ ಎಲೆ
*ಶುಂಠಿ ತುರಿ – ೨ ಚಮಚ
*ಈರುಳ್ಳಿ – ೨
*ಬೆಳ್ಳುಳ್ಳಿ – ೨
*ಎಣ್ಣೆ – ೧೦೦ ಮಿ.ಲೀ
*ಟೊಮೆಟೋ – ೨
*ಅರಿಶಿಣ – ೧ ಚಮಚ
*ಧನಿಯಾ ಪುಡಿ – ೧ ಚಮಚ
*ಬೆಣ್ಣೆ – ೧ ಚಮಚ
*ತುಪ್ಪ – ೧ ಚಮಚ
*ಚಕ್ಕೆ – ೫-೬ ಪೀಸ್
*ಏಲಕ್ಕಿ – ೫-೬
*ಲವಂಗ- ೫-೬
*ಗೋಡಂಬಿ – ೧೦
*ಉಪ್ಪು – ರುಚಿಗೆ ತಕ್ಕಷ್ಟು
*ನೀರು – ೩೦೦ ಮಿ.ಲೀ
ಮಾಡುವ ವಿಧಾನ :
ತೆಂಗಿನಕಾಯಿ ತುರಿ, ಮೆಣಸು, ಏಲಕ್ಕಿ, ಚಕ್ಕೆ, ಲವಂಗ, ಗೋಡಂಬಿ, ಬಿಳಿ ಎಳ್ಳು, ಉಪ್ಪು, ಗಸಗಸೆಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ. ಕಾದ ಎಣ್ಣೆಗೆ ಬ್ಯಾಡಗಿ ಮೆಣಸಿನಕಾಯಿ, ಕರಿಬೇವು, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಕರಿಬೇವು, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಈರುಳ್ಳಿ ಹಾಕಿ ಹುರಿದು ಕೊಳ್ಳಿ. ನಂತರ ಟೊಮೆಟೋ, ರುಚಿಗೆ ತಕ್ಕಷ್ಟು ಉಪ್ಪು, ಚಿಕನ್ ಪೀಸ್, ಅರಿಶಿಣ, ಧನಿಯಾ ಪುಡಿ, ಅಚ್ಚಖಾರದ ಪುಡಿ, ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಬೇಯಲು ಬಿಡಿ. ಕೊನೆಯಲ್ಲಿ ಬೆಣ್ಣೆ, ತುಪ್ಪ ಹಾಕಿ ಮಿಕ್ಸ್ ಮಾಡಿದರೆ, ಚಿಕನ್ ಚಿಟ್ಟಿ ನಾಡು ಮಸಾಲ ಸವಿಯಲು ಸಿದ್ಧ.