ಚಿಕನ್ ಶಾಕುತಿ
ಬೇಕಾಗುವ ಸಾಮಗ್ರಿಗಳು
*ಚಿಕನ್ – ೧/೨ ಕೆ.ಜಿ
*ಈರುಳ್ಳಿ – ೨
*ಟೊಮೆಟೊ – ೨
*ತೆಂಗಿನಕಾಯಿ ತುರಿ – ೨ ಚಮಚ
*ಕರಿಬೇವು – ೧೦ ಎಲೆ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಶುಂಠಿ – ೨ ಚಮಚ
*ಬೆಳ್ಳುಳ್ಳಿ – ೧
*ಧನಿಯಾ – ೧ ಚಮಚ
*ಬ್ಯಾಡಗಿ ಮೆಣಸಿನಕಾಯಿ – ೮
*ಉಪ್ಪು – ರುಚಿಗೆ ತಕ್ಕಷ್ಟು
*ಚಕ್ಕೆ – ೩
*ಲವಂಗ – ೪
*ಏಲಕ್ಕಿ – ೨
*ಗಸಗಸೆ – ೧ ಚಮಚ
*ಅರಿಶಿಣ ಪುಡಿ -೧/೨ ಚಮಚ
*ಎಣ್ಣೆ – ೫ ಚಮಚ
ಮಾಡುವ ವಿಧಾನ :
ಪ್ಯಾನಿಗೆ ಎಣ್ಣೆ ಹಾಕಿ. ಕಾದ ನಂತರ ದಪ್ಪಗೆ ಹೆಚ್ಚಿದ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ತೆಂಗಿನ ಕಾಯಿ ತುರಿ, ಅರಿಶಿಣ ಪುಡಿ ಹಾಕಿ ಬೆರೆಸಿ. ಇದನ್ನು ಬೌಲಿಗೆ ಹಾಕಿಕೊಳ್ಳಿ. ಪ್ಯಾನಿಗೆ ಎಣ್ಣೆ ಹಾಕಿ ಕಾದ ನಂತರ ಗಸಗಸೆ, ಬ್ಯಾಡಗಿ ಮೆಣಸಿನಕಾಯಿ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಹುರಿಯಿರಿ. ಇದರೊಂದಿಗೆ ಮೊದಲು ಹುರಿದುಕೊಂಡ ಈರುಳ್ಳಿ, ತೆಂಗಿನ ಕಾಯಿ ತುರಿಯನ್ನು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಇನ್ನೊಂದು ಬೌಲಿಗೆ ಚಿಕನ್, ಅರಿಶಿಣ, ಎಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಿ. ಕೆಲಕಾಲ ನೆನೆಯಲು ಬಿಡಿ. ಪ್ಯಾನಿಗೆ ೨ ಚಮಚ ಎಣ್ಣೆ ಹಾಕಿ. ಕಾದ ನಂತರ ಕರಿಬೇವು, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೋ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇದಕ್ಕೆ ನೆನೆಸಿದ ಚಿಕನ್ ಹಾಕಿ ಕೈ ಯಾಡಿಸಿ. ಸ್ವಲ್ಪ ಸಮಯದ ನಂತರ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಮುಚ್ಚಳ ಮುಚ್ಚಿ ೧೫ ನಿಮಿಷ ಬೇಯ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ ಚಿಕನ್ ಶಾಕುತಿ ರೆಡಿ.