ಚಿಕನ್ ಗ್ರೀನ್ ಮಸಾಲ
ಬೇಕಾಗುವ ಸಾಮಗ್ರಿಗಳು
*ಚಿಕನ್ ಪೀಸ್ -೧/೨ ಕೆ.ಜಿ
*ಪುದೀನ ಸೊಪ್ಪು – ಸ್ವಲ್ಪ
*ಹಸಿ ಮೆಣಸಿನಕಾಯಿ – ೨
*ಈರುಳ್ಳಿ – ೨
*ಟೊಮೆಟೋ – ೨
*ಕಾಳು ಮೆಣಸು – ೧ ಚಮಚ
*ಚಕ್ಕೆ – ೨ ಪೀಸ್
*ಲವಂಗ – ೩
*ಏಲಕ್ಕಿ – ೩
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ತೆಂಗಿನಕಾಯಿ ತುರಿ – ಸ್ವಲ್ಪ
*ಧನಿಯಾ ಪುಡಿ – ೧ ಚಮಚ
*ಉಪ್ಪು – ೧ ಚಮಚ
*ಎಣ್ಣೆ – ೧೫೦ ಮಿ.ಲೀ
ಮಾಡುವ ವಿಧಾನ :
ಟೊಮೆಟೋವನ್ನು ರುಬ್ಬಿಟ್ಟುಕೊಳ್ಳಿ. ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು, ಕಾಳು ಮೆಣಸು, ಹಸಿರು ಮೆಣನಕಾಯಿ, ಈರುಳ್ಳಿ, ತೆಂಗಿನಕಾಯಿ ತುರಿ, ಚಕ್ಕೆ, ಲವಂಗ, ಏಲಕ್ಕಿಯನ್ನು ಪ್ರತ್ಯೇಕ ವಾಗಿ ರುಬ್ಬಿಕೊಂಡು ಮಸಾಲ ರೆಡಿ ಮಾಡಿಕೊಳ್ಳಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ರುಬ್ಬಿರುವ ಮಸಾಲೆಯನ್ನು ಎಣ್ಣೆಯಲ್ಲಿ ಹಾಕಿ. ನಂತರ ಧನಿಯಾ ಪುಡಿ. ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ನ್ನು ಹಾಕಿ ಚೆನ್ನಾಗಿ ಕಲಸಿ, ಇದಕ್ಕೆ ರುಬ್ಬಿಕೊಮಡ ಟೊಮೆಟೋ ಮಿಶ್ರಣದ ನೀರನ್ನು ಹಾಕಿ ಕುದಿಯಲು ಬಿಡಿ. ಆ ಮೇಲೆ ಉಪ್ಪು-ಚಿಕನ್ ಹಾಕಿ ಚೆನ್ನಾಗುಇ ಹುರಿಯಿರಿ. ಸ್ವಲ್ಪ ಕಾಲ ಬಾಣಲೆಯನ್ನು ಮುಚ್ಚಿ ಬೇಯಿಸಿದರೆ ಚಿಕನ್ ಗ್ರೀನ್ ಮಸಾಲ ರೆಡಿ.