ಲೆಮನ್ ಚಿಕನ್
ಬೇಕಾಗುವ ಸಾಮಗ್ರಿಗಳು
*ಚಿಕನ್ – ೧/೨ ಕೆ.ಜಿ
*ಈರುಳ್ಳಿ – ೧ ಕೆ.ಜಿ
*ಶುಂಠಿ – ೧ ಚಮಚ
*ಹಸಿರು ಮೆಣಸಿನಕಾಯಿ – ೨ ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ದಪ್ಪ ಮೆಣಸಿನಕಾಯಿ – ೨ ಪೀಸ್
*ಕಾರ್ನ್‌ಫ್ಲೋರ್ – ೧ ಚಮಚ
*ಮೈದಾ ಹಿಟ್ಟು – ೧ ಚಮಚ
*ಮೊಟ್ಟೆ – ೧
*ಕಾಳುಮೆಣಸಿನ ಪುಡಿ – ೧ ಚಮಚ
*ಅರಿಶಿಣ – ೧ ಚಮಚ
*ಚಿಲ್ಲಿಸಾಸ್ – ೧ ಚಮಚ
*ಸೋಯಾಸಾಸ್ – ೧ ಚಮಚ
*ನಿಂಬೆರಸ – ೧ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ೧೫೦ ಮಿ.ಲೀ
ಮಾಡುವ ವಿಧಾನ :
ಬೌಲ್‌ಗೆ ಚಿಕನ್ ಪೀಸ್ ಹಾಕಿ. ಜೊತೆಗೆ ಮೊಟ್ಟೆ, ಉಪ್ಪು, ಚಿಲ್ಲಿಸಾಸ್, ಸೋಯಾಸಾಸ್, ಕಾಳು ಮೆಣಸಿನಪುಡಿ, ಮೈದಾ ಹಿಟ್ಟು, ಕಾರ್ನ್‌ಫ್ಲೋರ್‌ನೊಂದಿಗೆ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿಕೊಂಡ ನಂತರ ಇದನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ. ಕಾದ ನಂತರ ಶುಂಠಿ, ದಪ್ಪ ಮೆನಸಿನಕಾಯಿ, ಹಸಿರು ಮೆಣಸಿನಕಾಯಿ, ಈರುಳ್ಳಿಯನ್ನು ಹಾಕಿ ಬಾಡಿಸಿ. ಅಗತ್ಯವಿರುವಷ್ಟು ನೀರು, ಫ್ರೈ ಮಾಡಿರುವ ಚಿಕನ್, ಉಪ್ಪು, ಅರಿಶಿಣ, ಕಾಳು ಮೆಣಸಿನ ಪುಡಿ, ಚಿಲ್ಲಿ ಸಾಸ್, ನಿಂಬೆ ರಸ, ಕೊತ್ತಂಬರಿಸೊಪ್ಪನ್ನು ಹಾಕಿ ಎಲ್ಲವೂ ಬೆರೆತು ಕೊಳ್ಳುವಂತೆ ಕಲಸಿದರೆ ಲೆಮನ್ ಚಿಕನ್ ರೆಡಿ.