ಜಿಂಜರ್ ಚಿಕನ್
ಬೇಕಾಗುವ ಸಾಮಗ್ರಿಗಳು
*ಚಿಕನ್ – ೧/೪ ಕೆ.ಜಿ
*ಮೊಟ್ಟೆ – ೧
*ದಪ್ಪ ಮೆಣಸಿನಕಾಯಿ – ೪
*ಶುಂಠಿ – ೪ ಚಮಚ
*ಹಸಿರು ಮೆಣಸಿನಕಾಯಿ – ೨
*ಈರುಳ್ಳಿ – ೧
*ಕಾರ್ನ್ ಫ್ಲೋರ್ – ೧/೪ ಚಮಚ
*ಈರುಳ್ಳಿ – ೧
*ಚಿಲ್ಲಿ ಸಾಸ್ – ೧ ಚಮಚ
*ಕಾಳು ಮೆಣಸಿನ ಪುಡಿ – ೧/೨ ಚಮಚ
*ನಿಂಬೆರಸ – ೧/೨ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ೨೦೦ ಮಿ.ಲೀ
*ಮೈದಾ – ೨ ಚಮಚ
*ಸೋಯಾಸಾಸ್ – ೧/೨ ಚಮಚ
ಮಾಡುವ ವಿಧಾನ :
ಬೌಲ್‌ಗೆ ಚಿಕನ್, ಮೊಟ್ಟೆ, ಉಪ್ಪು, ಸೋಯಾಸಾಸ್, ಚಿಲ್ಲಿ ಸಾಸ್, ಕಾನ್‌ಫ್ಲೋರ್ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ. ಕಾದ ನಂತರ ಚಿಕನ್ ಪೀಸ್ ಹಾಕಿ ಫ್ರೈ ಮಾಡಿ. ಮತ್ತೋಂದು ಪ್ಯಾನ್‌ಗೆ ಎಣ್ಣೆ ಹಾಕಿ. ಕಾದ ನಂತರ ಶುಂಠಿ, ದಪ್ಪ ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಈರುಳ್ಳಿ ಹಾಕಿ ಒಂದು ಹದಕ್ಕೆ ಬಾಡಿಸಿ. ಇದಕ್ಕೆ ಕರಿದ ಚಿಕನ್, ಉಪ್ಪು, ಸೋಯಾಸಾಸ್, ಚಿಲ್ಲಿ ಸಾಸ್, ಕಾಳು ಮೆಣಸಿನ ಪುಡಿ ಹಾಕಿ. ಮುಚ್ಚಳ ಮುಚ್ಚಿ ಬೇಯಿಸಿ. ಕೊನೆಯಲ್ಲಿ ಕಾರ್ನ್ ಫ್ಲೋರ್, ನಿಂಬೆರಸ ಹಾಕಿ ಕಲಸಿದರೆ, ಜಿಂಜರ್ ಚಿಕನ್ ತಿನ್ನಲು ರೆಡಿ.